|
| ಬಂದೇ ಬರ್ತಾಳೆಯಲ್ಲಿ ಸ್ಲಂಬಾಲನಾಗಿ ಸೂರ್ಯ |
| ಗುರುವಾರ, 12 ಮಾರ್ಚ್ 2009 ( 19:26 IST ) | |
ನಾಯಕ ಸ್ಲಂ ಬಾಲ. ನಾಯಕಿ ಶ್ರೀಮಂತನ ಮಗಳು. ಹದಿನೇಳರ ಹುಡುಗಿ. ನಾಯಕನನ್ನು ಮೆಚ್ಚಿ ಬೆಳೆದ ಪ್ರೀತಿ ಹೆಮ್ಮರವಾಗುತ್ತದೆ. ತಂದೆಯ ವಿರೋಧವನ್ನು ಲೆಕ್ಕಿಸದೆ ಓಡಿ ಹೋಗಿ ಇಬ್ಬರು ಮದುವೆಯಾಗುತ್ತಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ ಇದು ಬಂದೇ ಬರ್ತಾಳೆ ಚಿತ್ರದ ಒನ್ ಲೈನ್ ಸ್ಟೋರಿ.
ಚಿತ್ರವನ್ನು ದೇವದಾಸ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್‌ನಿಂದ ಯು ಸರ್ಟಿಫೀಕೇಟ್ ದೊರೆತಿದೆ. ಮಟಮಾರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಬೆಂಗಳೂರು ಸುತ್ತಮುತ್ತ, ಮೇಲುಕೋಟೆ, ನಂದಿಬೆಟ್ಟ ಮುಂತಾದ ಕಡೆಗಳಲ್ಲಿ ಮಾತಿನ ಭಾಗ ಮುಗಿಸಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ.
ಒಬ್ಬ ಸ್ಲಂ ಹುಡುಗನ ಪಾತ್ರದ ಬಗ್ಗೆ ನಾಯಕ ಸೂರ್ಯ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿ ಇಲ್ಲದ ಅಲೆಮಾರಿಯಾಗಿ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎನ್ನುತ್ತಾರೆ ಅವರು. ನಾಯಕಿಯಾಗಿ ಅಂಬಾರಿಯ ಸುಪ್ರಿಯಾ ನಟಿಸುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳ ಅಂತ್ಯದಲ್ಲಿ ತೆರೆಗೆ ಬಂದೇ ಬರ್ತಾಳೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಆರ್ಥಿಕ ಸುಧಾರಣೆಯಾಗಲಿದೆ. ಅವಿವಾಹಿತರಿಗೆ ನೂತನ ವಿಚಾರಗಳು ಹಾನಿಯನ್ನು ತರಲಿವೆ. ನಿಮ್ಮ ಯತ್ನಗಳಿಗೆ ಅಡೆತಡೆ ತರಲು ಕೆಲವರು ಪ್ರಯತ್ನಿಸುತ್ತಾರೆ. ವ್ಯಾಪಾರಿಗಳಿಗೆ ಉತ್ತಮ ಲಾಭ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದರೊಂದಿಗೆ ರಾಜಕೀಯ ರಂಗೇರುತ್ತಿದೆ. ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೊಸ ಹೊಸ ಮಾರ್ಗೋಪಾಯಗಳನ್ನು ಮಾಡುತ್ತಿವೆ |
| |
|
|
|
|
|
|