ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
'ಹಾಗೆ ಸುಮ್ಮನೆ' ಮಾತನಾಡಿದ ಪ್ರೀತಂ
ಶುಕ್ರವಾರ, 2 ಜನವರಿ 2009   ( 19:20 IST )
ಹಾಗೆ ಸುಮ್ಮನೆ ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರ ಬಿಡುಗಡೆಯಾದ ನಂತರ ಪತ್ರಿಕಾಗೋಷ್ಠಿ ಕರೆದು ತಮ್ಮ ಚಿತ್ರದ ಬಗ್ಗೆ ಒಂದಷ್ಟು ಹೇಳಿಕೊಂಡರು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಚಿತ್ರ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರು.ಮುಂಗಾರು ಮಳೆ ಸಿನಿಮಾದ ನಿರೀಕ್ಷೆಯ ಮಟ್ಟವನ್ನು ತಲುಪಲು ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡರು. ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂದು ಪ್ರೇಕ್ಷಕರು ಹೇಳಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು.

ಒಂದು ಒಳ್ಳೆಯ ಚಿತ್ರ ಮಾಡಬೇಕೆಂಬ ಆಸೆಯಿಂದ ಲೊಕೇಷನ್ ಹುಡುಕಲು ಇಡೀ ರಾಜ್ಯವನ್ನು ಅವರು ಸುತ್ತಿದ್ದಾರಂತೆ. ಕ್ಯಾಮೆರಾಮನ್ ಕೃಷ್ಣ ಅವರ ಜೊತೆ ಹೊಸ ಸ್ಥಳವನ್ನು ಹುಡುಕಲು ಸುಮಾರು ಐದು ಸಾವಿರ ಕಿ.ಮೀ ಅಲೆದಾಡಿದರಂತೆ. ಹೊಸ ಮುಖದ ಶೋಧಕ್ಕೂ ಹೆಚ್ಚು ಕಮ್ಮಿ ಅವರು ಅಷ್ಟೇ ಕಷ್ಟಪಟ್ಟರಂತೆ. ನಾಯಕ ಕಿರಣ್ ಮೊದಲ ಸಲ ರಿಜೆಕ್ಟ್ ಆಗಿದ್ದರಂತೆ. ನಂತರ ಸ್ಕ್ರೀನ್ ಟೆಸ್ಟ್ ಮಾಡಿ, ಎರಡು ಸಲ ಮೀಟಿಂಗ್ ಮಾಡಿ ಈ ಪಾತ್ರಕ್ಕೆ ಹೊಂದುತ್ತಾರೆ ಎಂದು ನಿರ್ಧರಿಸಿ ಆಯ್ಕೆ ಮಾಡಲಾಯಿತಂತೆ.

ನಾಯಕ ನಟ ಕಿರಣ್ ಈ ಸಿನಿಮಾಕ್ಕಾಗಿ ಎರಡು ತಿಂಗಳ ಕಾಲ ತಮ್ಮನ್ನು ಮಾನಸಿಕವಾಗಿ ಕೃಷ್ಣ ಮತ್ತು ಪ್ರೀತಂ ಸಿದ್ಧಗೊಳಿಸಿದ್ದಾಗಿ ಹೇಳಿದರು. ನಾಯಕಿ ಸುಹಾಸಿ ಸುಮ್ಮನೆ ನಗು ಬೀರಿದರು. ಶರತ್ ಬಾಬು ಹಲವು ವರ್ಷಗಳ ನಂತರ ಪ್ರೇಕ್ಷಕರ ಜೊತೆ ಕುಳಿತು ನೋಡಿದ್ದು, ಈ ಚಿತ್ರವನ್ನಂತೆ. ಸಾಮಾನ್ಯವಾಗಿ ಪ್ರೇಮಿಗಳು ಕಷ್ಟ ಎದುರಿಸುತ್ತಾರೆ. ಆದರೆ ಇಲ್ಲಿ ಪ್ರೀತಿಗೆ ಎಲ್ಲರೂ ಪ್ರೋತ್ಸಾಹಿಸುತ್ತಾರೆ ಎಂದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯಶ್ ರಾಕಿಂಗ್
ಮತ್ತೆ ಕನ್ನಡಕ್ಕೆ ಜೆನಿಲಿಯಾ
ಹಂಸ ಪುರಾಣ
ಪರಿಚಯ ಶೂಟಿಂಗ್ ಮುಕ್ತಾಯ
ಅಶೋಕ್ ನಾಯಕನ ಪಾತ್ರದೊಂದಿಗೆ ಫೆ.14 ಕ್ಕೆ ಬ್ರೂಸ್ಲೀ
ಅಂಜದಿರು ಭಿನ್ನ ಚಿತ್ರ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದು ಹೊಸ ಪಕ್ಷ: ರಾಜ್ಯದಲ್ಲಿ ಎನ್‌ಡಿಎಗೆ ಬಲ
ರಾಜ್ಯದಲ್ಲಿ ಉಪಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ..
ಆಪರೇಷನ್ ಸಕ್ಸಸ್; ಆಡಳಿತ ವೈಫಲ್ಯ ನಿವಾರಣೆ ಹೇಗೆ?
ಒಕ್ಕಲಿಗರ ಭದ್ರಕೋಟೆ ಉಳಿಸಿಕೊಂಡ ಜೆಡಿಎಸ್
ಮನರಂಜನೆ
ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು
ಮುಂದೆ ಓದಿ|ಮತ್ತಷ್ಟು...