ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಹಂಸ ಪುರಾಣ
ಅದು ಗಾಂಧಿನಗರದ ಗಾಳಿಯ ಪ್ರಭಾವ ಎಂದರೆ ತಪ್ಪಲ್ಲ. ದುಡ್ಡಿದ್ದವರಿಗೆ ಸೆಲ್ಯೂಟ್ ಹೊಡೆಯುವವರು ಇಲ್ಲಿ ಬೇಜಾನ್ ಜನ ಇದ್ದಾರೆ. ಈಗ ಹಂಸಲೇಖಾ ಕೂಡಾ ಇದಕ್ಕೆ ಸೇರಿದ್ದಾರೆ ಎಂದರೆ ತಪ್ಪಲ್ಲ. ಇತ್ತೀಚೆಗೆ ನಡೆದ ಕಬ್ಬಡ್ಡಿ ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖಾ ಬರಲಿಲ್ಲ. ಕಾರಣ ಸಿಂಪಲ್. ಚಿತ್ರತಂಡದೊಂದಿಗೆ ಮಾಡಿಕೊಂಡ ಮುನಿಸು.

ಕಬ್ಬಡ್ಡಿ ಚಿತ್ರ ಮೊದಲಿನಿಂದಲೂ ವಿವಾದ ಸೃಷ್ಟಿಸುತ್ತಲೇ ಬಂದಿದೆ. ಹಿಂದೆ ಇದರ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ಈ ಕಥೆಯನ್ನು ತಮಿಳಿನಲ್ಲಿ ಮಾಡಿದ್ದಾರೆ ಎಂದು ನಿರ್ದೇಶಕರ ನಡುವೆ ವಿವಾದವಾಯಿತು. ಆದರೆ ಈಗ ಮತ್ತೊಂದು ಕಿರಿಕ್ ಆರಂಭವಾಗಿದೆ. ಹೇಳಿ ಕೇಳಿ ಈ ಚಿತ್ರ ಹೊಸಬರ ಚಿತ್ರ. ರಂಗಭೂಮಿ ಹಿನ್ನೆಲೆಯಿಂದ ಬಂದ ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೊಸಬರ ಚಿತ್ರವೆಂದರೆ ತಾತ್ಸಾರ ಜಾಸ್ತಿ.

ಚಿತ್ರಕ್ಕೆ ಸಂಗೀತವೇನೋ ಹಂಸಲೇಖಾ ನೀಡಿದರು. ಆದರೆ ರೀರೆಕಾರ್ಡಿಂಗ್ ಮಾಡಬೇಕಾದರೆ 8 ಲಕ್ಷ ನೀಡಬೇಕೆಂಬ ಷರತ್ತು ಇಟ್ಟರಂತೆ. ಆದರೆ ಈಗಾಗಲೇ ಕೋಟಿಗೂ ಮೀರಿ ಖರ್ಚು ಮಾಡಿರುವ ಕಬ್ಬಡ್ಡಿ ತಂಡಕ್ಕೆ ಅಷ್ಟೊಂದು ಹಣ ನೀಡಲು ಕಷ್ಟವಾಗಿದೆ. ಕೊಂಚ ಕಡಿಮೆ ಮಾಡಿ ಎಂದು ಕೇಳಿದರೂ ಹಂಸ ಒಪ್ಪಲಿಲ್ಲ. ಕೊನೆಗೂ ನಿರ್ದೇಶಕರು ಬೇರೆಯವರಲ್ಲಿ ಕಡಿಮೆ ದುಡ್ಡಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಹಂಸಲೇಖಾ ಮುನಿಸಿಕೊಂಡು ಕ್ಯಾಸೆಟ್ ಬಿಡುಗಡೆಗೆ ಬರಲಿಲ್ಲ. ಗಾಂಧಿನಗರಲ್ಲಿ ಶ್ರೀಮಂತರಿಗೊಂದು ನ್ಯಾಯ...
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪರಿಚಯ ಶೂಟಿಂಗ್ ಮುಕ್ತಾಯ
ಅಶೋಕ್ ನಾಯಕನ ಪಾತ್ರದೊಂದಿಗೆ ಫೆ.14 ಕ್ಕೆ ಬ್ರೂಸ್ಲೀ
ಅಂಜದಿರು ಭಿನ್ನ ಚಿತ್ರ
ಕ್ರಿಕೆಟ್ ಬೆಟ್ಟಿಂಗ್ ಧಂಧೆ ಆಧರಿಸಿದ 'ಬಾಜಿ'
ಸತ್ಯಜಿತ್ ಈಗ ಕಾಮಿಡಿ
ಉಪೇಂದ್ರರ ತಮಸೋಮ ಜ್ಯೋತಿರ್ಗಮಯ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದು ಹೊಸ ಪಕ್ಷ: ರಾಜ್ಯದಲ್ಲಿ ಎನ್‌ಡಿಎಗೆ ಬಲ
ರಾಜ್ಯದಲ್ಲಿ ಉಪಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ..
ಆಪರೇಷನ್ ಸಕ್ಸಸ್; ಆಡಳಿತ ವೈಫಲ್ಯ ನಿವಾರಣೆ ಹೇಗೆ?
ಒಕ್ಕಲಿಗರ ಭದ್ರಕೋಟೆ ಉಳಿಸಿಕೊಂಡ ಜೆಡಿಎಸ್
ಮನರಂಜನೆ
ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು
ಮುಂದೆ ಓದಿ|ಮತ್ತಷ್ಟು...