|
| ಪ್ರೇಮ್ ಕಹಾನಿ |
| ಶನಿವಾರ, 22 ನವೆಂಬರ್ 2008 ( 18:15 IST ) | |
ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ ಮಾಡಿಕೊಂಡು ಚಿತ್ರಕಥೆ ಬರೆಯುವುದಿಲ್ಲ. ನನ್ನ ಸುತ್ತಲಿರುವ ಜನರ ಉದಾಹರಣೆಗಳನ್ನು ನೋಡಿ ಬರೆಯುತ್ತೇನೆ. ಹೀಗಾಗಿ ಇದು ರಿಯಾಲಿಸ್ಟಿಕ್ ಸ್ಟೋರಿ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿಯ ಕಥೆಗಳು ಬಂದು ಹೋಗಿರುತ್ತೆ ಎಂದರು ನಿರ್ದೇಶಕ ಚಂದ್ರು.
ತಾಜ್‌ಮಹಲ್ ಚಿತ್ರದ ನಂತರ ಅವರು ಈಗ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದು 'ಪ್ರೇಮ್ ಕಹಾನಿ' ಎಂಬ ಪಕ್ಕಾ ಲವ್ ಸ್ಟೋರಿ ಚಿತ್ರ. ಚಿತ್ರದಲ್ಲಿ ಅಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ಎಲ್ಲೊ ಇದ್ದ ಅಜಯ್ ಈಗ ಚಿತ್ರರಂಗದಲ್ಲಿದ್ದಾನೆ ಎಂದರೆ ಅದಕ್ಕೆ ಕಾರಣ ತಾಜ್‌ಮಹಲ್. ಹೊಸ ಚಿತ್ರದಲ್ಲಿ ಸ್ಲಂ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ಅಜಯ್.
ತೆಲುಗು ಚಿತ್ರರಂಗದಲ್ಲಿ ಈಗಷ್ಟೇ ಹೆಸರು ಮಾಡುತ್ತಿರುವ ನಟಿ ಶೀಲಾ ಈ ಚಿತ್ರದ ನಾಯಕಿ. ಚಿಕ್ಕಂದಿನಿಂದಲೂ ಸ್ಟೇಜ್ ಷೋಗಳಲ್ಲಿ ಕುಣಿದು ಅಭಿನಯಿಸಿದ್ದೆ. ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ. ಇಲಿ ಗ್ಲ್ಯಾಮರ್ ಹುಡುಗಿ. ನನಗೆ ಇದು ಚೆನ್ನಾಗಿ ಸೂಟ್ ಆಗುತ್ತದೆ ಎಂದರು ಶೀಲಾ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಆತ ಪ್ರತಿ ಮನೆಮನೆಗೆ ಹೋಗಿ ಬಳೆ ತೋಡಿಸುತ್ತಾನೆ. ಪ್ರತಿಯೊಬ್ಬರ ಕಷ್ಟಸುಖ ವಿಚಾರಿಸುತ್ತಾನೆ. ನಗು ನಗುತ್ತಾ ಮಾತನಾಡುತ್ತಾನೆ. ಎಲ್ಲರೂ ಆತನಿಗೆ ತಾಯಿ, ತಂಗಿ ಸಮಾನ. ಕೈ |
| |
|
|
|
|
|
|
|