|
| ಸಿಹಿಗಾಳಿಯಾಗಿ ಬರಲಿರುವ ಶಿರೀನ್ |
| ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008 ( 16:11 IST ) | |
ದೀರ್ಘ ಸಮಯದ ನಂತರ ಶಿರೀನ್ ಮತ್ತೆ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಈ ಹಿಂದೆ ದರ್ಶನ್ ಜೊತೆ 'ಧ್ರುವ' ಹಾಗೂ 'ಭೂಪತಿ' ಚಿತ್ರದಲ್ಲಿ ನಟಿಸಿದ್ದರು. ಈಗ 'ಸಿಹಿಗಾಳಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರು ಮೊದಲ ಬಾರಿಗೆ ನಟಿಸಿದ ಚಿತ್ರ 'ಪೊಲೀಸ್ ಡಾಗ್'. ಆದರೆ ಆ ಚಿತ್ರ ಬಂದು ಹೋದ ಬಗ್ಗೆ ಯಾರಿಗೂ ಗೊತ್ತಾಗಲೇ ಇಲ್ಲ.
ಆ ಚಿತ್ರದ ಬಗ್ಗೆ ಶಿರೀನ್‌ನಲ್ಲಿ ಕೇಳಿದರೆ, ನನಗೆ ಸರಿಯಾಗಿ ನೆನಪಿಲ್ಲ. ನಾನು 13-14ನೇ ವಯಸ್ಸಿನಲ್ಲಿದ್ದಾಗ ಆ ಚಿತ್ರದಲ್ಲಿ ನಟಿಸಿದ್ದೆ. ಹೆಚ್ಚೆಂದರೆ ಆರೇಳು ದಿನಗಳ ಕಾಲ ಚಿತ್ರೀಕರಣ ಮಾಡಿರಬಹುದು ಅಷ್ಟೇ ಎನ್ನುತ್ತಾರೆ ಈಕೆ. ಈಕೆ ಕನ್ನಡಕ್ಕಿಂತ ತಮಿಳಿನಲ್ಲಿ ಸ್ವಲ್ಪ ಹೆಚ್ಚು ಅವಕಾಶ ಪಡೆದಿದ್ದಾರೆ.
ಈಕೆ ತಮಿಳಿನಲ್ಲಿ ಎಂಟು ಚಿತ್ರಗಳಲ್ಲಿ ನಟಿಸಿದ್ದಾರೆ. 'ಪೂವೈ ತಲೈವಾ', 'ವಿಲ್', ಹಾಗೂ 'ಕ್ಯಾಶ್ ಅಂಡ್ ಮಾಯ' ಸೇರಿದಂತೆ ಇತರ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಗಾಳಿಪಟ ಚಿತ್ರದ ನಿರ್ಮಾಪಕ ಸೂರ್ಯಪ್ರಕಾಶ್ ರಾವ್ ಅವರ ಗ್ರೂಪ್‌ನ ಆರು ಚಿತ್ರಗಳಲ್ಲಿ ನಟಿಸಲು ಸಹಿ ಮಾಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು. |
| |
|
|
|
|
|
|
|