|
| ನೋಡಿ ಅಪ್ಪ-ಮಗಳ ಜೋಡಿ |
| ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008 ( 16:09 IST ) | |
ಮತ್ತೊಮ್ಮೆ ಅಪ್ಪ-ಮಗಳು ಜೊತೆಯಾಗಲಿದ್ದಾರೆ. ಹಿಂದೊಮ್ಮೆ ಜೊತೆಯಾಗಿ ಎಲ್ಲರಲ್ಲೂ ಮೋಡಿ ಮಾಡಿದ ಇವರು ಈ ಬಾರಿ ಇನ್ನಷ್ಟು ವಿಶಿಷ್ಟವಾಗಿ ಗಮನ ಸೆಳೆಯಲಿದ್ದಾರೆ. ಹೌದು ಶಿವರಾಜ್ ಕುಮಾರ್ ಹಾಗೂ ಅವರ ಮಗಳು ನಿವೇದಿತಾ ಈ ಹಿಂದೆ ಅಂಡಮಾನ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ಮತ್ತೆ 'ಮಾದೇಶ ಭಾಗ-2' ರಲ್ಲಿ ನಟಿಸಲಿದ್ದಾರಂತೆ.
ಮಾದೇಶ ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಪ್ರೇರಣೆಗೊಂಡ ರವಿ ಶ್ರೀವತ್ಸ ಮಾದೇಶ ಭಾಗ -2 ಮಾಡಲಿದ್ದಾರೆ. ಇಲ್ಲಿ ತಂದೆ- ಮಗಳ ನಡುವಿನ ಸೆಂಟಿಮೆಂಟ್ ಹೆಚ್ಚಿದೆಯಂತೆ. ಅದಕ್ಕೆ ಬೇರೆಯವರನ್ನು ಆಯ್ಕೆ ಮಾಡುವುದು ಬೇಡ ಎಂದು ಶಿವಣ್ಣನ ಮಗಳನ್ನೇ ಆಯ್ಕೆ ಮಾಡಲು ಮುಂದಾಗಿದ್ದಾರಂತೆ.
ಅಂಡಮಾನ್ ಚಿತ್ರದಲ್ಲಿ ಮಗುವಾಗಿದ್ದಾಗ ನಟಿಸಿದದ ನಂತರ ಶಿವಣ್ಣನ ಮಗಳು ಬೇರೆ ಯಾವ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಮತ್ತೆ ಒಂದಾಗುತ್ತಿದ್ದಾರೆ. ಏನಾಗುತ್ತದೋ ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು. |
| |
|
|
|
|
|
|
|