|
| ಅಮೂಲ್ಯ ಅಭಿಮಾನಿಗಳಿಗೆ ಚೈತ್ರದ ಚಂದ್ರಮ |
| ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008 ( 15:25 IST ) | |
ಇದು ನಟಿ ಅಮೂಲ್ಯ ಅಭಿಮಾನಿಗಳಿಗೆ ಸಂತಸದ ಸುದ್ದಿ. ಚಿತ್ರವನ್ನು ಎಸ್. ನಾರಾಯಣ್ ನಿರ್ದೇಶನ ಮಾಡಿದ್ದು ಅವರ ಮಗ ಪಂಕಜ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ಪಟ್ಟ ಅಲಂಕರಿಸಿದ್ದಾರೆ.
ಅಮೂಲ್ಯ ನಾಯಕಿಯಾಗಿ ನಟಿಸಿದ 'ಚೆಲುವಿನ ಚಿತ್ತಾರ' ಚಿತ್ರ ಶತದಿನ ಪೂರೈಸಿದ್ದಲ್ಲದೇ ನಟಿ ಅಮೂಲ್ಯ ಅನೇಕ ಚಿತ್ರರಸಿಕರ ಮನಗೆದ್ದಳು. ಚೆಲುವಿನ ಚಿತ್ತಾರ ಚಿತ್ರ ಹಿಟ್ ಆಗುತ್ತಿದ್ದಂತೆ ಅನೇಕ ನಿರ್ಮಾಪಕರು ಈಕೆಯ ಕಾಲ್ಶೀಟ್‌ಗೆ ಮುಗಿಬಿದ್ದರು. ಆದರೆ ಈಕೆ ಕಲಿಕೆ ಮುಖ್ಯ ಎಂದು ಬಂದ ಅವಕಾಶಗಳನಗ್ನು ನಿರಾಕರಿಸಿದಳು. ಈಗ ರಜೆಯಲ್ಲಿ ಮತ್ತೆ ನಾರಾಯಣ್ ಅವರ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರ ಇಂದಿನ ಯುವಕರ ನಡುವೆ ನಡೆಯುವ ಪ್ರೇಮಕಥೆಯನ್ನು ವಿಭಿನ್ನವಾಗಿ ತೋರಿಸಿದ್ದಲ್ಲದೇ ತಿಳಿ ಹಾಸ್ಯ ಹಾಗೂ ಮನಸ್ಸಿಗೆ ಕಚಗುಳಿ ಇಡುವಂತಹ ದೃಶ್ಯಗಳನ್ನು ಚಿತ್ರ ಒಳಗೊಂಡಿದೆಯಂತೆ. ಕಾಶ್ಮೀರ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಎಸ್. ನಾರಾಯಣ್ ಯಾವುದೇ ಕೆಲಸವನ್ನು ಪಕ್ಕಾ ಮಾಡಿರುತ್ತಾರೆ. ಜೊತೆಗೆ ಅಮೂಲ್ಯ ಬೇರೆ ಇದರಿಂದ ಸಹಜವಾಗಿಯೇ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ನಿರೀಕ್ಷೆ ಮೂಡಿದೆ. ಏನಾಗುತ್ತದೋ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು. |
| |
|
|
|
|
|
|
|