|
| ಯಾರದು ವಿನೋದ್ ರಾಜ್! |
| ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008 ( 17:42 IST ) | |
ಡ್ಯಾನ್ಸ್ ರಾಜ ಕಡೆಯಿಂದ ಈಗ ಹೊಸ ಸುದ್ದಿ ಬಂದಿದೆ. ಬಹಳ ದಿನಗಳ ನಂತರ ವಿನೋದ್ ರಾಜ್ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ವಿನೋದ್ ತಾಯಿ, ಲೀಲಾವತಿಯವರೇ ನಿರ್ಮಿಸಲಿರುವ ಯಾರದು ಚಿತ್ರಕ್ಕೆ ವಿನೋದ್ ರಾಜ್ ನಾಯಕ.
ಚಿತ್ರವನ್ನು ಶ್ರೀನಿವಾಸ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಹಲವು ಚಿತ್ರಗಳಲ್ಲಿ ಸಂಭಾಷಣೆಕಾರರಾಗಿ ಕೆಲಸ ನಿರ್ವಹಿಸಿದ ಕೌಶಿಕ್ ಈಗ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಸಸ್ಪೆನ್ಸ್, ಮರ್ಡರ್ ಮಿಸ್ಟ್ರಿ. ಯಾರದೋ ಇಮೇಜನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಿಸುತ್ತಿಲ್ಲ ಎನ್ನುತ್ತಾರೆ ನಿರ್ದೇಶಕರು.
ಈ ಮೊದಲು ವಿನೋದ್ ರಾಜ್ ನಟಿಸಿದ್ದ ಶುಕ್ರ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ಕನ್ನಡದ ಕಂದ ಚಿತ್ರ ಶತದಿನ ಪೂರೈಸಿದ್ದಲ್ಲದೆ, ವಿನೋದ್ ರಾಜ್‌ಗೆ ಹೆಸರು ತಂದಿತ್ತು. ಈಗ ತಮ್ಮ ತಾಯಿ ಲೀಲಾವತಿ ಕಂಬೈನ್ಸ್‌ನ ಮೂರನೇ ಚಿತ್ರದಲ್ಲಿ ಮೂಲಕ ಮತ್ತೊಮ್ಮೆ ವಿನೋದ್ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ |
| |
|
|
|
|
|
|
|