|
| ಈ ವಾರ ತಾಜ್ ಮಹಲ್ ತೆರೆಗೆ |
| ಬೆಂಗಳೂರು, ಬುಧವಾರ, 23 ಜುಲೈ 2008 ( 16:22 IST ) | |
ಭಾರೀ ಪ್ರಚಾರ ಗಿಟ್ಟಿಸಿಕೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದ ತಾಜ್ ಮಹಲ್ ಈ ವಾರ ಬಿಡುಗಡೆಯಾಗುತ್ತಿದೆ. ಒಂದು ನವಿರಾದ ಪ್ರೇಮಕಥೆಯನ್ನು ಚಿತ್ರ ಹೊಂದಿದೆ. ನಾಯಕ- ನಾಯಕಿ ಇಬ್ಬರು ಈ ಚಿತ್ರದ ಮೂಲಕ ತಮಗೊಂದು ಅದ್ಭುತ ಬ್ರೇಕ್ ಸಿಗಬಹುದೆಂದು ಎದುರು ನೋಡುತ್ತಿದ್ದಾರೆ.
ಪೂಜಾ ಗಾಂಧಿ ಹಾಗೂ ಅಜಯ್ ಇಲ್ಲಿ ಅಭಿನಯಿಸಿದ್ದು ಮುಂಗಾರು ಮಳೆ ನಂತರ ಪೂಜಾಗಾಂಧಿಗೂ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ನಾಯಕ ಅಜಯ್ ಎಕ್ಸ್‌ಕ್ಯೂಸ್ ಮೀ ಚಿತ್ರದ ನಂತರ ಅನೇಕ ಚಿತ್ರಗಳಲ್ಲಿ ನಟಿಸಿದರೂ ಅದ್ಯಾವುದು ಅವರ ಕೈ ಹಿಡಿಯಲಿಲ್ಲ. ಆದರೆ ತಾಜ್ ಮಹಲ್ ತನಗೆ ಹೊಸದೊಂದು ಲೋಕವನ್ನು ತೆರೆಯುತ್ತದೆ ಎಂಬ ನಿರೀಕ್ಷೆಯೊಂದಿಗೆ ಅಜಯ್ ಶುಭ ಶುಕ್ರವಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಚಿತ್ರವನ್ನು ಚಂದ್ರು ನಿರ್ದೇಶಿಸಿದ್ದು, ಗಾಂಧಿನಗರ ಇವರ ಹೊಸ ಸಿನಿಮಾದ ಬಗ್ಗೆ ಕುತೂಹಲದಿಂದಿದೆ. ಚಿತ್ರಕ್ಕೆ ಅಭಿಮಾನ್ ಸಂಗೀತ ಸಂಯೋಜಿಸಿದ್ದು, ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದು ಏಕಕಾಲದಲ್ಲಿ ಇಂಗ್ಲೆಂಡ್ ಹಾಗೂ ಅಮೇರಿಕಾಗಳಲ್ಲೂ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಚಂದ್ರು ಚಿತ್ರವನ್ನು ಪ್ರೀತಿಯಿಂದ ನಿರ್ದೇಶಿಸಿದ್ದಾರಂತೆ. ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ. ನಿರ್ಮಾಪಕರಿಗೆ ಈಗಾಗಲೇ ಶೆ. 65ರಷ್ಟು ಹಾಕಿದ ಹಣ ಬಂದಿದೆಯಂತೆ.
ಯಾವುದಕ್ಕೂ ತಾಜ್ಮಹಲ್‌ಗೆ ಎಷ್ಟು ಜನ ಪ್ರವಾಸ ಹೊರಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|