|
| ಹಣಕ್ಕಾಗಿ ಸಿನಿಮಾ ಮಾಡಿಲ್ಲ! |
| ಬೆಂಗಳೂರು, ಬುಧವಾರ, 23 ಜುಲೈ 2008 ( 15:11 IST ) | |
ನಂದಾದೀಪ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಒಂದೇ ಸಮನೆ ಮಾತನಾಡಲಾರಂಭಿಸಿದರು. 'ನಾನು ಸಿನಿಮಾವನ್ನು ಹಣಕ್ಕಾಗಿ ಮಾಡಿಲ್ಲ. ಸಂದೇಶ ಕೊಡುವ ಸಲುವಾಗಿ ಮಾಡಿದ್ದೇನೆ. ಚಿತ್ರರಂಗ ಎಂದ ಮೇಲೆ ಒಂದು ಚಿತ್ರ ಗೆಲ್ಲುತ್ತೆ. ಇನ್ನೊಂದು ಸೋಲುತ್ತೆ. ಅದು ಕಾಮನ್. ಆ ಬಗ್ಗೆ ನನಗೆ ಬೇಜಾರಿಲ್ಲ' ಎಂದರು.
ಈ ಹಿಂದೆ ಇವರು ದರ್ಶನ್, ಆದಿತ್ಯ ಅಭಿನಯದ 'ಸ್ನೇಹನಾ ಪ್ರೀತಿನಾ' ಚಿತ್ರ ನಿರ್ಮಿಸಿದ್ದರು. ಆದರೆ ಚಿತ್ರ ಗೆಲ್ಲಲಿಲ್ಲ. ಇಂದಿನ ಸಮಾಜಕ್ಕೆ ಹಣಕ್ಕಿಂತ ವಿದ್ಯೆ ಮುಖ್ಯ ಎಂಬುದು ಗೊತ್ತಾಗಿದೆ. ಎಷ್ಟೇ ಹಣ ಇದ್ದರೂ ವಿದ್ಯೆ ಇಲ್ಲ ಎಂದರೆ ಅದನ್ನು ಸದುಪಯೋಗ ಪಡಿಸಲು ಸಾಧ್ಯವಿಲ್ಲ ಎಂಬ ಪಾಠವನ್ನು ನನ್ನ ಚಿತ್ರದ ಮೂಲಕ ಸಾರಿದ್ದೇನೆ ಎಂದರು.
ಅಣಜಿ ನಾಗರಾಜ್ ಯಾವುದೇ ಸಿನಿಮಾ ಮಾಡಿದರೂ ಲೆಕ್ಕಾಚಾರ ಹಾಕಿಯೇ ಮಾಡುತ್ತಾರಂತೆ. ಆದರೆ ನಂದಾದೀಪ ಚಿತ್ರದಲ್ಲಿ ಲೆಕ್ಕಾಚಾರದ ಬಗ್ಗೆ ತಲೆಕೆಡಿಸಿಕೊಂಡಿಲ್ಲವಂತೆ. ಈ ಚಿತ್ರದಲ್ಲಿ ದೇವರಾಜ್ ಹಾಗೂ ಶ್ರುತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಶಿವು ನಿರ್ದೇಶಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|