|
| ಮಂಜನಾಥನಾಗಿ ಎದ್ದೇಳಲಿರುವ ಜಗ್ಗೇಶ್! |
| ಬೆಂಗಳೂರು, ಸೋಮವಾರ, 12 ಮೇ 2008 ( 13:27 IST ) | |
ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಅದು "ಎದ್ದೇಳು ಮಂಜುನಾಥ'. ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸುತ್ತಿದ್ದಾರೆ.
ಇದೊಂದು ವಿಶಿಷ್ಟ ಚಿತ್ರ. ಇಲ್ಲಿ ಜಗ್ಗೇಶ್‌ಗೆ ವಿಭಿನ್ನ ಪಾತ್ರವಿದೆ. ಅವರ ಬಾಡಿ ಲಾಂಗ್ವೇಜ್ ಹಾಗೂ ಡೈಲಾಗ್ ಶೈಲಿ ಇಲ್ಲಿ ಭಿನ್ನವಾಗಿರುತ್ತದೆ. ಸೋಮಾರಿಯ ಪಾತ್ರದಲ್ಲಿ ಜಗ್ಗೇಶ್ ಅದ್ಬುತವಾಗಿ ಅಭಿನಯಿಸಿದ್ದಾರೆ ಎಂದರು ನಿರ್ದೇಶಕ ಗುರುಪ್ರಸಾದ್. ಈಗಾಗಲೇ ಉದ್ಯಮದ ಮಂದಿ ಈ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿ ಯಾವುದೇ ರೀತಿಯ ಮೇಕಪ್ ಇಲ್ಲದೇ ಸ್ವಾಭಾವಿಕವಾಗಿ ಕಲಾವಿದರು ನಟಿಸಿದ್ದಾರೆ. ನಿರ್ದೇಶಕ ಗುರು ಇನ್ಸ್ ಪೆಕ್ಟರ್ ರೆಹಮತುಲ್ಲಾ ಎಂಬ ಒಂದು ಸಣ್ಣ ಪಾತ್ರದಲ್ಲಿ ಬಂದು ಹೋಗುತ್ತಾರೆ. ಚಿತ್ರಕ್ಕೆ ಜಗ್ಗೇಶ್‌ರನ್ನು ಹೊರತುಪಡಿಸಿ ಉಳಿದ ಕಲಾವಿದರು ಡಬ್ಬಿಂಗ್ ಮಾಡುತ್ತಿದ್ದಾರೆ.
ಚುನಾವಣಾ ಬಿಸಿ ಮುಗಿದ ನಂತರ ಜಗ್ಗೇಶ್ ಡಬ್ಬಿಂಗ್ ಮಾಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ. ಡಬ್ಬಿಂಗ್ ಮುಗಿದ ನಂತರ ವಿಶಿಷ್ಟ ರೀತಿಯ ಪೋಸ್ಟರ್ ಮೂಲಕ ಪ್ರಚಾರ ಮಾಡಲಿದ್ದೇವೆ ಎಂದರು ಗುರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|