ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಶಿವರುದ್ರಯ್ಯರಿಂದ ಮೇಘವರ್ಷಿಣಿ
ಬೆಂಗಳೂರು, ಶನಿವಾರ, 10 ಮೇ 2008   ( 13:41 IST )
'ದಾಟು' ವಿನಂತಹ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿದ ಶಿವರುದ್ರಯ್ಯ ಅವರು ನಿರ್ದೇಶಿಸುತ್ತಿರುವ 'ಮೇಘವರ್ಷಿಣಿ' ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಸಾಯಿಸುತೆ ಅವರ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಚಿಕ್ಕಮಗಳೂರು, ಕೊಟ್ಟಿಗೆಹಾರ, ಉಡುಪಿ, ಮಲೆಮಾರುತ ಗೆಸ್ಟ್‌ ಹೌಸ್‌ಗಳಲ್ಲಿ ಚಿತ್ರೀಕರಿಸಲಾಗಿದೆ.

ಮನೋವಿಜ್ಞಾನದ ವಿದ್ಯಾರ್ಥಿನಿ ಸಂಶೋಧನೆ ನಡೆಸಲೆಂದು ಪರಿಚಿತರ ಮನೆಗೆ ಬರುತ್ತಾಳೆ. ಅಲ್ಲಿ ವೈದ್ಯ ವಿದ್ಯಾರ್ಥಿಯೊಬ್ಬನಿಗೆ ಮಾನವ ಸಂಬಂಧಗಳ ಪ್ರೀತಿಯ ಚಿಕಿತ್ಸೆ ಕೊಡುವ ಅನಿವಾರ್ಯತೆ ಅವಳಿಗೆ ಎದುರಾಗುತ್ತದೆ. ಆ ಮೇಲೆ ಪ್ರೇಮಾಂಕರವಾಗುತ್ತದೆ. ಆದರೆ ಆಕೆಗೆ ಇನ್ನೊಬ್ಬನ ಜೊತೆ ಮದುವೆ ಏರ್ಪಾಡಾಗುವ ಮೂಲಕ ತ್ರಿಕೋನ ಪ್ರೇಮಕಥೆಯನ್ನು ಮೇರ್ಘವರ್ಷಿಣಿ ಚಿತ್ರ ಒಳಗೊಂಡಿದೆ.

'ಆ ದಿನಗಳು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅರ್ಚನಾ ಇಲ್ಲಿ ನಾಯಕಿ. ಆರ್ಯ ಚಿತ್ರದ ನಾಯಕ. ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿರುವ ಮಧುಸೂದನ್ ಇಲ್ಲಿ ಎರಡನೇ ನಾಯಕನಾಗಿ ನಟಿಸುತ್ತಿದ್ದಾರೆ. ಎಸ್.ಪಿ. ವೆಂಕಟೇಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಆರ್.ಗಿರಿ ಕ್ಯಾಮರಾ ಹಿಡಿದಿದ್ದಾರೆ. ಚಿತ್ರಕ್ಕೆ ಸುಂದರ್ ಅರಸ್ ಸಂಕಲನ ಮಾಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಹರ್ಷಿ ಚಿತ್ರೀಕರಣ ಪೂರ್ತಿ
ಮಚ್ಚು ಲಾಂಗಿನ ಚಿತ್ರ ಬಾಬಾ
ಬರ್ತಿದ್ದಾನೆ ಮಚ್ಚ ದಾರಿ ಬಿಡಿ!
ರೈಲಿನಲ್ಲಿ ಮುಸ್ಸಂಜೆ ಮಾತಿನ ಹಾಡು
ಗೆಲುವಿನ ಹುಡುಕಾಟದಲ್ಲಿ ಪ್ರೇಮ್
ನನ್ನವನು ಈಗ ಹೈದರಾಬಾದಿನಲ್ಲಿ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace