ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಮಚ್ಚು ಲಾಂಗಿನ ಚಿತ್ರ ಬಾಬಾ
ಬೆಂಗಳೂರು, ಗುರುವಾರ, 8 ಮೇ 2008   ( 15:49 IST )
ಎರಡು ವಾರಗಳ ಹಿಂದೆಯೇ ತೆರೆ ಕಾಣಬೇಕಿದ್ದ 'ಬಾಬಾ' ಚಿತ್ರ ಈ ವಾರ ತೆರೆ ಕಾಣುತ್ತಿದೆ. 18 ವರ್ಷದ ಯುವಕ ಮಚ್ಚು ಹಿಡಿದು ಕೊಚ್ಚುವ ದೃಶ್ಯ ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಚಿತ್ರವನ್ನು ಬಿಡುಗಡೆ ಮಾಡದೇ ಸಮಾಜಕ್ಕೆ ಉಪಕಾರ ಮಾಡಿ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಾಬಾ ಚಿತ್ರದ ನಿರ್ಮಾಪಕ ಶೋಭಾ ರಾಜಣ್ಣ ಅವರಿಗೆ ಹೇಳಿದರಂತೆ.

ಕೊನೆಗೆ ಸೆನ್ಸಾರ್ ಮಂಡಳಿಯನ್ನು ಕಾಡಿಬೇಡಿದ ನಂತರ ಈ ವಾರ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಚಿತ್ರದಲ್ಲಿ 22 ವರ್ಷದ ಯುವಕ ಲಾಂಗ್ ಹಿಡಿದು ಹೋರಾಡುವ ದೃಶ್ಯವಿದೆ. ಚಿತ್ರದಲ್ಲಿ ಎಸ್ಎಸ್ಎಲ್‌ಸಿ ಫೇಲ್ ಆದ ಹುಡುಗನಿಗೆ ಮುಂದೆ ಓದಬೇಕು ಎಂಬ ಆಸೆ ಇರುತ್ತದೆ. ಆದರೆ ಆತನ ಹದಿಹರೆಯ ಬಿಡಬೇಕೆ. ಆತ ಪ್ರೀತಿಯ ಬಲೆಗೆ ಬೀಳುತ್ತಾನೆ. ಇದು ಚಿತ್ರದ ಕಥಾಹಂದರ. ಪ್ರೀತಿಗಾಗಿ ಪ್ರಾಣ ಕೊಡಲು ಹಾಗೂ ಪ್ರಾಣ ತೆಗೆಯಲು ಸಿದ್ಧನಿರುತ್ತಾನೆ. ಇಲ್ಲಿ ಸೆಕೆಂಡ್ ಪಿಯುಸಿ ಓದುತ್ತಿರುವ ಕಾರ್ತಿಕ್ ನಾಯಕನಾಗಿ ಲಾಂಗ್ ಹಿಡಿದು ಕೊಚ್ಚಿದ್ದಾರೆ.

ಚಿತ್ರದಲ್ಲಿ ಅಪ್ಪ-ಮಗನ ಸಂಬಂಧ ತುಂಬಾ ಸೆಂಟಿಮೆಂಟ್ ಆಗಿದೆಯಂತೆ. ಬೇಜವಾಬ್ದಾರಿ ಮಗನಿಗೆ ತಂದೆ ಬೈಯುತ್ತಾನೆ. ಆದರೆ ಇಲ್ಲಿ ಮಾತ್ರ ತಂದೆ ತನ್ನ ಮೌನದಿಂದಲೇ ಮಗನನ್ನು ತಿದ್ದುತ್ತಾನೆ. ಚಿತ್ರದಲ್ಲಿ ರಮೇಶ್ ಭಟ್ ಅಪ್ಪನ ಪಾತ್ರ ನಟಿಸಿದ್ದಾರೆ. ಇವರು ಶಿವಮಣಿ ಚಿತ್ರದಲ್ಲೂ ಇದೇ ರೀತಿಯ ಸೆಂಟಿಮೆಂಟ್ ಅಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ತ್ರಿಶೂಲ್ ಈ ಚಿತ್ರದ ಬಗ್ಗೆ ನೀರೀಕ್ಷೆ ಇಟ್ಟುಕೊಂಡಿದ್ದಾರೆ. ಅಭಿನಯ ಕಲಿಯುವಾಗ ನಾನು ನಟನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಅದೃಷ್ಟಕ್ಕೆ ನಾಯಕನಾದೆ ಎಂದರು ಕಾರ್ತಿಕ್. ಚಿತ್ರದಲ್ಲಿ ಪ್ರಜ್ಞಾ ನಾಯಕಿಯಾಗಿ ನಟಿಸಿದ್ದಾರೆ. ತೆರೆಯ ಮೇಲೆ ಬಾಬಾನ ಮೋಡಿಯನ್ನು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬರ್ತಿದ್ದಾನೆ ಮಚ್ಚ ದಾರಿ ಬಿಡಿ!
ರೈಲಿನಲ್ಲಿ ಮುಸ್ಸಂಜೆ ಮಾತಿನ ಹಾಡು
ಗೆಲುವಿನ ಹುಡುಕಾಟದಲ್ಲಿ ಪ್ರೇಮ್
ನನ್ನವನು ಈಗ ಹೈದರಾಬಾದಿನಲ್ಲಿ
ಚಿತ್ರರಂಗ ಪ್ರವೇಶಿಸಲಿರುವ ಗಣೇಶ್ ತಮ್ಮ
ಮೇ 14ಕ್ಕೆ ಸಂಗಮಕ್ಕೆ ಮುಹೂರ್ತ
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
ap
 
ಸದ್ದಾಂನನ್ನು ಆವರಿಸಿದ್ದ ಏಡ್ಸ್ ಕಾಯಿಲೆ ಭಯ
ಇರಾಕಿನ ಪದಚ್ಯುತ ಸರ್ವಾಧಿಕಾರಿ, ಮಾನವೀಯತೆಯ ವಿರುದ್ಧ ಅಪರಾಧಕ್ಕೆ ಗಲ್ಲುಶಿಕ್ಷೆಗೆ ಗುರಿಯಾದ....
ಉತ್ತರ ಕರೊಲಿನ ಪ್ರೈಮರಿಯಲ್ಲಿ ಒಬಾಮಾ ಜಯಭೇರಿ
ಲೈಂಗಿಕಪಶು ಫ್ರಿಟ್ಜಲ್‌ನ ಇನ್ನೊಂದು ದೌರ್ಜನ್ಯ ಬಹಿರಂಗ
ಮನರಂಜನೆ
ಚಿತ್ರ ಸುದ್ದಿ - ಕನ್ನಡ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳನ್ನು ನಿರ್ಮಿಸಿ ಕ್ರಿಯೇಟಿವ್ ನಿರ್ದೇಶಕ ಎಂದು ಹೆಸರು ಗಳಿಸಿದ ಪ್ರೇಮ್ ಚಿತ್ರಕ್ಕೆ ಹೆಸರು ಇಡುವಲ್ಲಿಯೂ ನಿಸ್ಸಿಮರು. ಈ ಹಿಂದೆ ಇವರು ಕರಿಯಾ, ಎಕ್ಸ್ ಕ್ಯೂಸ್ ಮೀ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ... ಹೀಗೆ ವಿಶಿಷ್ಟ ರೀತಿಯ ಟೈಟಲನ್ನು ಇಟ್ಟಿದ್ದಾರೆ
ಮುಂದೆ ಓದಿ|ಮತ್ತಷ್ಟು...
Marketplace