|
| ರೈಲಿನಲ್ಲಿ ಮುಸ್ಸಂಜೆ ಮಾತಿನ ಹಾಡು |
| ಬೆಂಗಳೂರು, ಗುರುವಾರ, 8 ಮೇ 2008 ( 13:15 IST ) | |
ಕಿಚ್ಚ ಸುದೀಪ್ ಹಾಗೂ ರಮ್ಯಾ ಮತ್ತೊಮ್ಮೆ ಜೊತೆಯಾಗಿ ನಟಿಸಿರುವ 'ಮುಸ್ಸಂಜೆ ಮಾತು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು ಮಹೇಶ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಹಾಡಿನ ದೃಶ್ಯವೊಂದನ್ನು ರೈಲಿನಲ್ಲಿ ಚಿತ್ರೀಕರಿಸಲಾಯಿತು. ಆ ಒಂದು ಹಾಡಿಗೆ ಖರ್ಚಾದ ದುಡ್ಡೆಷ್ಟು ಗೊತ್ತೆ? ಬರೀ 25 ಲಕ್ಷ.
ಮೈಸೂರು-ಕೆ.ಆರ್.ನಗರಕ್ಕೆ ಓಡುವ ರೈಲಿನಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ಬರೆದಿರುವ 'ಏನಾಗಲಿ ಮುಂದೆ ಸಾಗಲಿ ಬಯಸಿದ್ದು ಸಿಗಲಿ ಬಾಳಲಿ' ಹಾಡನ್ನು ರೈಲಿನಲ್ಲಿ ಚಿತ್ರೀಕರಿಸಲಾಯಿತ್ತಂತೆ. ನಿಜಕ್ಕೂ ಇದೊಂದು ಚಾಲೆಂಜಿಂಗ್ ಕೆಲಸ ಅನ್ನುತ್ತಾರೆ ನಿರ್ದೇಶಕ ಮಹೇಶ್. ರಂಗ ಎಸ್ಎಸ್ಎಲ್‌ಸಿ ನಂತರ ಈ ಚಿತ್ರದ ಮೂಲಕ ರಮ್ಯಾ-ಸುದೀಪ್ ಜೋಡಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ಸ್ವತ: ಸುದೀಪ್ ಇಷ್ಟಪಟ್ಟು ಒಪ್ಪಿಕೊಂಡ ನಂತರ ರಮ್ಯಾಗೆ ಫೋನ್ ಮಾಡಿ ಚಿತ್ರವನ್ನು ಒಪ್ಪಿಕೊಳ್ಳಿ ಎಂದು ಹೇಳಿದರಂತೆ. ಸುದೀಪ್ ಸಾಧಾರಣವಾಗಿ ಯಾರಿಗೂ ಚಿತ್ರವನ್ನು ಒಪ್ಪಿಕೋ ಎಂದು ಹೇಳುವುದಿಲ್ಲ. ಆದರೆ ಈ ಚಿತ್ರವನ್ನು ಅವರಾಗಿ ಇಷ್ಟಪಟ್ಟು ಹೇಳಿದ್ದರಿಂದ ಒಪ್ಪಿಕೊಂಡೆ ಎಂದರು ರಮ್ಯಾ. ಭಾವನಾತ್ಮಕ ದೃಶ್ಯಗಳಲ್ಲಿ ಅಭಿನಯಿಸುವುದರಲ್ಲಿ ಸುದೀಪ್ ನಿಸ್ಸಿಮ ಎಂದು ಅವರ ಗುಣಗಾನ ಮಾಡಿದರು ರಮ್ಯಾ.
ಈ ಚಿತ್ರದ ಪಾತ್ರವನ್ನು ಇಷ್ಟಪಟ್ಟು ಸ್ವತ: ರಮ್ಯಾನೇ ಇದಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಅನುಫ್ರಭಾಕರ್ ನಟಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | ap |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳನ್ನು ನಿರ್ಮಿಸಿ ಕ್ರಿಯೇಟಿವ್ ನಿರ್ದೇಶಕ ಎಂದು ಹೆಸರು ಗಳಿಸಿದ ಪ್ರೇಮ್ ಚಿತ್ರಕ್ಕೆ ಹೆಸರು ಇಡುವಲ್ಲಿಯೂ ನಿಸ್ಸಿಮರು. ಈ ಹಿಂದೆ ಇವರು ಕರಿಯಾ, ಎಕ್ಸ್ ಕ್ಯೂಸ್ ಮೀ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ... ಹೀಗೆ ವಿಶಿಷ್ಟ ರೀತಿಯ ಟೈಟಲನ್ನು ಇಟ್ಟಿದ್ದಾರೆ |
| |
|
|
|
|
|
|
|