ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ನನ್ನವನು ಈಗ ಹೈದರಾಬಾದಿನಲ್ಲಿ
ಬೆಂಗಳೂರು, ಬುಧವಾರ, 7 ಮೇ 2008   ( 13:54 IST )
ಚುನಾವಣಾ ಬಿಸಿ ಎಲ್ಲರನ್ನೂ ತಟ್ಟಿದೆ. ಒಂದೆಡೆ ಅಕ್ರಮ ಮದ್ಯ, ಹಣ ಸಾಗಾಟ ಪತ್ತೆಯಾದರೆ ಇನ್ನೊಂದೆಡೆ ಬಿಡುಗಡೆಗೆ ಸಿದ್ಧವಾದ ಕೆಲವು ಚಿತ್ರಗಳಿಗೆ ಚುನಾವಣಾ ಗ್ರಹಣ ಹಿಡಿದಿದೆ. ಈ ಮಧ್ಯೆ ಹೊಸ ಚಿತ್ರಗಳಿಗೆ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಚಿತ್ರೀಕರಣ ಸಮಯದಲ್ಲಿ ಜನ ಒಂದೆಡೆ ಸೇರಿದರೆ ಅಲ್ಲಿ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅನುಮತಿ ಸಿಗುತ್ತಿಲ್ಲ.

ಚುನಾವಣಾಧಿಕಾರಿಗಳು ತಮಗೆ ಬೇಕಾದ ಕಡೆ ಚಿತ್ರೀಕರಣ ಮಾಡಲು ಅನುಮತಿ ನೀಡದ ಕಾರಣ 'ನನ್ನವನು' ಚಿತ್ರವನ್ನು ಹೈದರಬಾದಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಇಡೀ ನನ್ನವನು ಚಿತ್ರ ತಂಡವೇ ಬೀಡುಬಿಟ್ಟಿದೆ. ನಾಯಕ ಪ್ರಜ್ವಲ್, ನಾಯಕಿ ಅಂದ್ರಿತಾ ರೇ ಸೇರಿದಂತೆ ಅವಿನಾಶ್ ಕೂಡಾ ಅಲ್ಲೇ ಇದ್ದಾರೆ.

ಚಿತ್ರದ ಹಾಡಿನ ದೃಶ್ಯಗಳನ್ನು ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿರುವ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಜೊತೆಗೆ ಕೋರ್ಟ್ ಸನ್ನಿವೇಶವನ್ನು ಕೂಡಾ ಫಿಲ್ಮ್ ಸಿಟಿಯೊಳಗಡೆಯೇ ಚಿತ್ರೀಕರಿಸಲಾಗುತ್ತಿದೆ. ಚುನಾವಣಾ ಅಯೋಗದ ಕಟ್ಟುನಿಟ್ಟಿನ ಕ್ರಮದಿಂದ ನಮ್ಮಂತವರಿಗೆ ಇಲ್ಲಿ ಚಿತ್ರೀಕರಣ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ನನ್ನವನು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚಿತ್ರರಂಗ ಪ್ರವೇಶಿಸಲಿರುವ ಗಣೇಶ್ ತಮ್ಮ
ಮೇ 14ಕ್ಕೆ ಸಂಗಮಕ್ಕೆ ಮುಹೂರ್ತ
ಒಂದಾದ ಭಟ್-ಕೃಷ್ಣ
ಪ್ರೀತಂ ಗುಬ್ಬಿಯಿಂದ ಹಾಗೇ ಸುಮ್ಮನೆ....
ಸೆಂಟಿಮೆಂಟ್ ಚಿತ್ರ ತಬ್ಬಲಿ
ಬರಲಿದೆ ರಮೇಶ್ ನಿರ್ದೇಶನದ ಮತ್ತೊಂದು ಚಿತ್ರ
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಜೆಡಿಎಸ್‌ಗೆ ಬಹುಮತ: ಗೌಡರ ಹೊಸರಾಗ
ಜೆಡಿಎಸ್ ಪಕ್ಷದ ಬೆಂಬಲವಿಲ್ಲದೆ ರಾಜ್ಯದಲ್ಲಿ ಯಾವ ಪಕ್ಷವೂ ಅಧಿಕಾರ ನಡೆಸುವುದು ಅಸಾಧ್ಯ ...
ಮೈತ್ರಿ ಸರಕಾರಕ್ಕೆ ಅವಕಾಶ ಕಡಿಮೆ: ಸಮೀಕ್ಷೆ
ಕಟ್ಟುನಿಟ್ಟಿನ ಜಾರಿಗೆ ಮೆರಾಜುದ್ದೀನ್ ಆಗ್ರಹ
ಮನರಂಜನೆ
ಚಿತ್ರ ಸುದ್ದಿ - ನಿದೇಶಕ ಪ್ರಕಾಶ್ ಅವರು ನಿಖಿತಾಳನ್ನು ತನ್ನ ಚಿತ್ರ ವಂಶಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜ್ ಕುಟುಂಬ ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಈಗಾಗಲೇ ನಡೆದಿತ್ತು. ಚಿತ್ರದಲ್ಲಿ ಪುನೀತ್ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ನಾಯಕಿ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.
ಮುಂದೆ ಓದಿ|ಮತ್ತಷ್ಟು...
Marketplace