|
| ಖೇಣಿ ಜೀವನ ಚಿತ್ರ |
| ಮಂಗಳವಾರ, 19 ಮೇ 2009 ( 17:08 IST ) | |
ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು ಕೂಡಾ ಮಾಡಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಜೀವನ, ತಾವು ನಡೆದು ಬಂದ ಹಾದಿಯ ಕುರಿತು ಒಂದು ವಿಡಿಯೋ ಆಲ್ಬಂ ತಯಾರಿಸಿದ್ದಾರೆ. ಇವರ ಪಾತ್ರವನ್ನು ಖ್ಯಾತ ಗಾಯಕ ಸೋನು ನಿಗಂ ಮಾಡಿದ್ದಾರೆ. ಈ ಹಿಂದೆ ಕನ್ನಡದ ಹಾಡುಗಳಿಗಷ್ಟೇ ಸೀಮಿತವಾಗಿದ್ದ ಸೋನು ಈ ಬಾರಿ ಬಣ್ಣ ಹಚ್ಚಿದ್ದಾರೆ.
ಈ ಆಲ್ಬಂಗೆ 'ನೀನೇ ಬರಿ ನೀನೆ' ಎಂದು ಹೆಸರಿಡಲಾಗಿದೆ. ಈ ಆಲ್ಬಂನ್ನು ವಿಕ್ರಂ ರಾಜ್ದಾಸ್ ನಿರ್ದೇಶಿಸಿದ್ದಾರೆ. ಸುಮಾರು 1 ಕೋಟಿ ವೆಚ್ಚದಲ್ಲಿ ಈ ಕಿರುಚಿತ್ರ ಸಿದ್ಧಗೊಂಡಿದೆ. ಇದರಲ್ಲಿ 9 ಹಾಡುಗಳಿವೆ. ಚಿತ್ರದ ಒಂದು ಹಾಡಿನಲ್ಲಿ ಖೇಣಿ ಬಣ್ಣ ಹಚ್ಚಿದ್ದಾರೆ.
ಆಧುನಿಕ ಯುಗದಲ್ಲಿ ಪಾಲಕರ-ಮಕ್ಕಳ ನಡುವಿನ ಸಂಬಂಧ ದೂರವಾಗುತ್ತದೆ. ಪಾಲಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂಬುದನ್ನು ಈ ಚಿತ್ರದ ಮೂಲಕ ಹೇಳುತ್ತಾರಂತೆ.
ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದ್ದು, ಮನೋಮೂರ್ತಿ ಸಂಗೀತ ನೀಡಿದ್ದಾರೆ.ಖ್ಯಾತ ರೂಪದರ್ಶಿ ಮಾಧುರಿ ಭಟ್ಟಾಚಾರ್ಯ ಇಲ್ಲಿ ನಟಿಸಿದ್ದಾರೆ. ಚಿತ್ರವನ್ನು ಮೈಸೂರು, ಮಡಿಕೇರಿ, ಶಿವಮೊಗ್ಗ, ನಂದಿಬೆಟ್ಟ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರಿಕರಿಸಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|