ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಬೀಗರಾಗುವ ಕುಮಾರಸ್ವಾಮಿ-ಯಡಿಯ‌ೂರಪ್ಪ !
ಮಂಗಳವಾರ, 19 ಮೇ 2009   ( 17:03 IST )
ರಾಜಕೀಯ ವೈರಿಗಳಾದ ಯಡಿಯ‌ೂರಪ್ಪ ಮತ್ತು ಕುಮಾರಸ್ವಾಮಿ ಅವರ ಮಕ್ಕಳು ಪರಸ್ಪರ ಪ್ರೀತಿಸಿ ವಿವಾಹವಾದರೆ ಹೇಗಿರುತ್ತೆ. ಬಹುಶಃ ಇದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಇದನ್ನು ನೀವು ತೆರೆಯ ಮೇಲೆ ನೋಡಬಹುದು. ಹೌದು, ನಿರ್ದೇಶಕ ದಯಾಳ್ ಪದ್ಮನಾಭ್ ತಮ್ಮ 'ಕದ್ದುಮುಚ್ಚಿ'ಚಿತ್ರಕ್ಕೆ ಇದ್ದೇ ಕಥೆಯನ್ನು ಸಿದ್ಧಪಡಿಸಿದ್ದಾರೆ.

ಪ್ರಣಯಭರಿತ ಕಾಮಿಡಿ ಚಿತ್ರಕ್ಕೆ ರಾಜಕೀಯ ತಿರುವು ಕೊಟ್ಟಿದ್ದೇನೆ ಎನ್ನುತ್ತಾರೆ ದಯಾಳ್. ಚಿತ್ರದ ಮುಖ್ಯಭೂಮಿಕೆಯಲ್ಲಿ ದಿಗಂತ್ ಹಾಗೂ ರಾಧಿಕಾ ಪಂಡಿತ್ ನಟಿಸುತ್ತಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ಲಿಂಗಾಯಿತ ಹಾಗೂ ಗೌಡ ಕುಟುಂಬಗಳನ್ನು ತೋರಿಸುತ್ತಾರಂತೆ. ಆ ಕುಟುಂಬದ ಮುಖ್ಯಸ್ಥರ ಹೆಸರು ಕೂಡಾ ಕುಮಾರಸ್ವಾಮಿ ಹಾಗೂ ಯಡಿಯ‌ೂರಪ್ಪ. ಹಾಗಂತ ಇದರ ಹಿಂದೆ ಯಾವುದೇ ವ್ಯಕ್ತಿಯ ಮನಸ್ಸನ್ನು ನೋಯಿಸುವ ಉದ್ದೇಶವಿಲ್ಲ ಎನ್ನುತ್ತಾರೆ ದಯಾಳ್.

ಈ ಹಿಂದೆ ರವಿ ಬೆಳಗೆರೆಯ 'ಮುಖ್ಯಮಂತ್ರಿ ಐ ಲವ್ ಯೂ' ಟೈಟಲ್ ಹಾಗೂ 'ರಾಧಿಕೆ ಇದೇನೇ ನಿನ್ನ ಸರಸ' ಎಂಬ ಟ್ಯಾಗ್ಲೈನ್ನನ್ನು ಹೊಂದಿತ್ತು. ಆದರೆ ಇದು ವಿವಾದ ಸೃಷ್ಟಿಸಿ ಸದ್ಯ ಕೋರ್ಟಿನಲ್ಲಿದೆ. ಈಗ ಈ ಚಿತ್ರ ಯಾವ ವಿವಾದ ಸೃಷ್ಟಿಸುತ್ತದೋ ಗೊತ್ತಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬರ್ತಾ ಇದೆ ಪೊಗರು
ರಮೇಶ್ ಯಾದವ್ 'ನಾಯಕಿ' 'ತೆರೆಮರೆಯಲ್ಲಿ'
ಉಪ್ಪಿ ಈಗ ಲಂಡನ್ ಗೌಡ
'ಈ ಪ್ರೀತಿ ಯಾರಿಗೋಸ್ಕರ'ದಲ್ಲಿ ರಘುವೀರ್
ಮೋನಿಕಾ 'ದೇವರು ಕೊಟ್ಟ ತಂಗಿ'
ಗುಬ್ಬಚ್ಚಿಗಳಿಗೆ ಪ್ರಶಸ್ತಿ ಸುರಿಮಳೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...