ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಬರ್ತಾ ಇದೆ ಪೊಗರು
ಮಂಗಳವಾರ, 19 ಮೇ 2009   ( 17:01 IST )
ಕನ್ನಡದಲ್ಲಿ ಈಗ ಮತ್ತೊಂದು ಚಿತ್ರ ಬರತ್ತಿದೆ. ಹೆಸರು 'ಪೊಗರು'. ಎ.ವಿ.ಜಯರಾಮಯ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಿಗೆ ಕೇಶಾಲಂಕಾರ ನಿರ್ವಹಣೆ ಮಾಡಿರುವ ವಿ.ಚಾರಿ ಈ ಚಿತ್ರದ ನಿರ್ಮಾಪಕರು.

ಸದ್ಯ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದ್ದು, ಈ ತಿಂಗಳ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೆರಲಿದೆ. ಇಲ್ಲಿ ಇಬ್ಬರು ನಾಯಕರು. ಅಂದ ಮೇಲೆ ಇಬ್ಬರು ನಾಯಕಿಯರು ಇದ್ದೇ ಇರುತ್ತಾರೆ. ದತ್ತರಾಜ್ ಮತ್ತು ಜಾಸ್ಮಿನ್ ಈಗಾಗಲೇ ಚಿತ್ರಕ್ಕೆ ಆಯ್ಕೆಯಾಗಿರುವ ಜೋಡಿ. ದತ್ತರಾಜ್ ಇನ್ನು ಬಿಡುಗಡೆಯಾಗಬೇಕಿರುವ 'ರಾಣಿ ರತ್ನಮಾಲ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿಷ್ಕರ್ಷ, ಬೆಳದಿಂಗಳ ಬಾಲೆ ಸೇರಿದಂತೆ 40 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಜಯರಾಂ ಅವರಿಗೆ ಇದು 5ನೇ ಚಿತ್ರ. ದಕ್ಷಿಣ ಭಾರತಕ್ಕೆ ಪ್ರಪ್ರಥಮವಾಗಿ ಯೂನಿವಾಕ್ಸ್ ವಾದನ ಪರಿಚಯಿಸಿದ ಖ್ಯಾತಿಯ ಹನುಮಂತಚಾರ್ ಅವರ ಪುತ್ರ ಸಾಯಿ ಗೋಪಿನಾಥ್ ಸಂಗೀತ ನಿರ್ದೇಶಕರು. 30-35 ದಿನ ಚಿತ್ರೀಕರಣ ಮಾಡಲಿದ್ದಾರಂತೆ. ಪೊಗರು ಚಿತ್ರದ ಪೊಗರು ಯಾವ ರೀತಿ ಇರುತ್ತದೆ ಎಂದು ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಮೇಶ್ ಯಾದವ್ 'ನಾಯಕಿ' 'ತೆರೆಮರೆಯಲ್ಲಿ'
ಉಪ್ಪಿ ಈಗ ಲಂಡನ್ ಗೌಡ
'ಈ ಪ್ರೀತಿ ಯಾರಿಗೋಸ್ಕರ'ದಲ್ಲಿ ರಘುವೀರ್
ಮೋನಿಕಾ 'ದೇವರು ಕೊಟ್ಟ ತಂಗಿ'
ಗುಬ್ಬಚ್ಚಿಗಳಿಗೆ ಪ್ರಶಸ್ತಿ ಸುರಿಮಳೆ
ದುಬೈಯಲ್ಲಿ ಕನ್ನಡದ ಕಂಪು
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...