|
| ಉಪ್ಪಿ ಈಗ ಲಂಡನ್ ಗೌಡ |
| ಸೋಮವಾರ, 18 ಮೇ 2009 ( 17:52 IST ) | |
ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ 'ಲಂಡನ್ ಗೌಡ' ಸೆಟ್ಟೇರಿದೆ. ಮಂಡ್ಯದ ಸಾಮಾನ್ಯ ವ್ಯಕ್ತಿಯೊಬ್ಬ ಲಂಡನ್ನಿನಲ್ಲಿ ದೊಡ್ಡ ಸಾಧನೆ ಮಾಡುವುದೇ ಚಿತ್ರದ ಕಥಾ ಹಂದರ. ಈ ಹಿಂದೆ ಶುಭಂ ಚಿತ್ರವನ್ನು ನಿರ್ಮಿಸಿದ್ದ ಎನ್ಆರ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪೇಂದ್ರ ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಚಿತ್ರವನ್ನು ಯತೀಶ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಉಪೇಂದ್ರ ಅವರದು. ಜೋಶ್ ಚಿತ್ರದ ಛಾಯಾಗ್ರಾಹಣಕ್ಕೆ ಪ್ರಶಂಸೆ ಪಡೆದ ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೂ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಕರ್ನಾಟಕ ಮೂಲದ ಸ್ನೇಹಾ ಉಲ್ಲಾಳ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ.
'ಲಂಡನ್ ಗೌಡ' ಚಿತ್ರದ ಮುಖ್ಯ ದೃಶ್ಯಗಳನ್ನು ಲಂಡನಲ್ಲಿ ಚಿತ್ರೀಕರಿಸಲಾಗುತ್ತದೆ. ಈ ಚಿತ್ರವನ್ನು ಅದ್ದೂರಿಯಾಗಿ ತರಲು ಚಿತ್ರತಂಡ ಶ್ರಮಿಸುತ್ತಿದೆ. ಈ ಮಧ್ಯೆ ಕಳೆದ ವಾರ ಬಿಡುಗಡೆಯಾಗಬೇಕಿದ್ದ ದುಬೈ ಬಾಬು ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|