|
| ಹೊಡಿಮಗ ಚಿತ್ರದ ದೃಶ್ಯಗಳಿಗೆ ಶಿವಣ್ಣ ಪಶ್ಚಾತ್ತಾಪ |
| ಶನಿವಾರ, 16 ಮೇ 2009 ( 18:13 IST ) | |
ನಟ ಶಿವರಾಜ್ಕುಮಾರ್ ಪಶ್ಚಾತ್ತಾಪ ಪಟ್ಟಿದ್ದಾರೆ. ಅವರ ಹೊಡಿಮಗ ಚಿತ್ರದ ಎರಡು ದೃಶ್ಯಗಳ ಅವರು ಬೇಸತ್ತು ಪಶ್ಚಾತ್ತಾಪ ಪಟ್ಟಿದ್ದಲ್ಲದೇ ಇನ್ನು ಮುಂದೆ ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಅವರನ್ನು ಎಚ್ಚರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಮುಖದ ಮೇಲೆ ಮೂತ್ರ ಮಾಡುವ ಹಾಗೂ ತನ್ನ ತಂಗಿಯ ಚಿತಾಭಸ್ಮವನ್ನು ಕುಡಿಯುವ ದೃಶ್ಯಗಳಲ್ಲಿ ಅವರು ನಟಿಸಿದ್ದರು. ಕಮಲಹಾಸನ್ ಅವರ ಮಹಾನದಿ ಚಿತ್ರದ ದೃಶ್ಯದ ಪ್ರೇರಣೆಯಿಂದ ಅವರು ಪೊಲೀಸ್ ಪೇದೆಯೊಬ್ಬನ ಮುಖದ ಮೇಲೆ ಮೂತ್ರ ಮಾಡುವ ದೃಶ್ಯವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಅಲ್ಲದೇ ಅಣ್ಣ-ತಂಗಿಯ ಅನುಬಂಧದ ಪರಮಾಧಿಯ ದೃಶ್ಯವನ್ನು ತೋರಿಸಲು ತಂಗಿಯ ಚಿತಾಭಸ್ಮವನ್ನು ಕುಡಿಯುವ ದೃಶ್ಯವನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಆದರೆ ಈ ದೃಶ್ಯವನ್ನು ಪ್ರೇಕ್ಷಕರು ಮಾತ್ರ ಅರಗಿಸಿಕೊಳ್ಳಲಿಲ್ಲ. ಅಲ್ಲದೇ ಶಿವಣ್ಣನಂತಹ ಜವಾಬ್ದಾರಿಯುತ ನಟನೊಬ್ಬ ಇಂತಹ ದೃಶ್ಯಗಳಲ್ಲಿ ಅಭಿನಯಿಸಿರುವುದರ ಬಗ್ಗೆ ಪ್ರೇಕ್ಷಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಶಿವಣ್ಣನಿಗೂ ಬೇಸರವಾಗಿತ್ತು.ತಮ್ಮ ಮುಂದಿನ ಎಲ್ಲಾ ಚಿತ್ರಗಳು ತುಂಬಾ ವೈವಿಧ್ಯಮಯವಾಗಿರುತ್ತವೆ ಎನ್ನುತ್ತಾರೆ ಶಿವಣ್ಣ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ |
| |
|
|
|
|
|
|