|
| ಪ್ರೇಮಿಸಂ ಮೊರೆ ಹೋದ ರತ್ನಜ |
| ಶುಕ್ರವಾರ, 15 ಮೇ 2009 ( 17:35 IST ) | |
ರೌಡಿಸಂ, ಗೂಂಡಾಯಿಸಂಗಳನ್ನು ಕೇಳಿದ ಕನ್ನಡ ಪ್ರೇಕ್ಷಕರಿಗೆ ನಿರ್ದೇಶಕ ರತ್ನಜ ಪ್ರೇಮಿಸಂನ್ನು ಪರಿಚಯಿಸಲು ಹೊರಟ್ಟಿದ್ದಾರೆ. 'ನೆನಪಿರಲಿ'ಯಂತಹ ಯಶಸ್ವಿ ಹಾಗೂ ಹೊಂಗನಸಿನಂತಹ ತೋಪು ಚಿತ್ರವನ್ನು ನೀಡಿದ ರತ್ನಜ ಈಗ ಪ್ರೇಮಿಸಂ ಮೊರೆ ಹೋಗಿದ್ದಾರೆ.
ಪೊಲೀಸ್ ಆಯುಕ್ತ ಮತ್ತು ಪೇದೆ ನಡುವಿನ ಅವಿನಾಭಾವದ ಸಂಬಂಧವಿರುವ, ಎರಡು ಕುಟುಂಬಗಳ ನಡುವಿನ ಪ್ರೀತಿಯೇ ಈ ಚಿತ್ರದ ಕಥಾವಸ್ತು. ಪೊಲೀಸ್ ಆಯುಕ್ತರ ಮತ್ತು ಪೊಲೀಸ್ ಪೇದೆಯ ಮಕ್ಕಳ ನಡುವೆ ಒಂದು ರೀತಿಯ ವೈಷಮ್ಯ ಏರ್ಪಟ್ಟು ಕೊನೆಗೆ ಪ್ರೇಮಕ್ಕೆ ತಿರುಗುವುದು ಚಿತ್ರದ ಕಥೆ.
ಮೈಸೂರಿನ ಜಲಪುರಿಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಕತೆ ಹೆಣೆದಿದ್ದಾರೆ. ಜತೆಗೆ ಬೆಳಗಾಂನಲ್ಲಿ ನಡೆದ ಮತ್ತೊಂದು ಪ್ರಕರಣವನ್ನು ಸೇರಿಸಿ ಚಿತ್ರಕತೆಯನ್ನು ಪಕ್ಕಾ ಮಾಡಲಾಗಿದೆಯಂತೆ. ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಚೇತನ್ ಚಂದ್ರ ಹಾಗೂ ನೀರನ್ ಎಂಬವರು ನಾಯಕರು. ಚೇತನ್ ಈಗಾಗಲೇ ಪಿಯುಸಿ ಚಿತ್ರದಲ್ಲಿ ನಟಿಸಿದ್ದಾರೆ. ಮತ್ತೊಬ್ಬ ನಾಯಕ ನೀರನ್ ಕೊಡಗಿನವರು. ಚಿತ್ರದಲ್ಲಿ ಆರು ಹಾಡುಗಳಿದ್ದು, ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ |
| |
|
|
|
|
|
|