|
| ದಯಾಳ್ ಹರಿಕಥೆ ಮಾಡುತ್ತಾರಂತೆ |
| ಬುಧವಾರ, 13 ಮೇ 2009 ( 18:24 IST ) | |
ದಯಾಳ್ 'ಹರಿಕಥೆ' ಮಾಡ ಹೊರಟ್ಟಿದ್ದಾರೆ. ಹಾಗಾಂತ ಅವರಿಗೆ ಜಿಗುಪ್ಸೆ ಬಂತೆಂದರ್ಥವಲ್ಲ. ಇದು ಅವರ ಹೊಸ ಚಿತ್ರದ ಹೆಸರು. 'ಸರ್ಕಸ್' ಚಿತ್ರ ಮಾಡಿ ಕೈ ಸುಟ್ಟುಕೊಂಡ ನಂತರ ಇವರು 'ಕದ್ದುಮುಚ್ಚಿ' ಎಂಬ ಚಿತ್ರ ಮಾಡಲು ಹೊರಟಿದ್ದರು. ಆದರೆ ಈಗ ಅದಕ್ಕಿಂತ ಮೊದಲು ಹರಿಕಥೆ ಮಾಡುತ್ತಾರಂತೆ.
ಈ ಬಾರಿ ಸರ್ಕಸ್‌ನಂತಹ ಸೀರಿಯಸ್ ಸಬ್ಜೆಕ್ಟ್ ಮಾಡೋದಿಲ್ವಂತೆ. ಇದೊಂಥರ ಹಾಸ್ಯ ಪ್ರಧಾನ ಚಿತ್ರ. ಈ ಹಿಂದೆ 'ಬಾ ಬಾರೋ ರಸಿಕ' ಎಂಬ ಚಿತ್ರ ಬಂದಿತ್ತು. ಹರಿಕಥೆ ಕೂಡಾ ಸಾಮಾನ್ಯವಾಗಿ ಅದೇ ರೀತಿ ಇರುತ್ತದಂತೆ. ಅಲ್ಲಿ ರಮ್ಯಾಕೃಷ್ಣ ಮಾಡಿದ ಪಾತ್ರವನ್ನು ಇಲ್ಲಿ ಸುಮನ್ ರಂಗನಾಥ್ ಮಾಡುತ್ತಾರೆ. ಈ ಚಿತ್ರದ ಮೂಲಕ ಇಬ್ಬರು ಹೊಸ ಹುಡುಗರನ್ನು ಪರಿಚಯಿಸುತ್ತಿದ್ದಾರಂತೆ.
ದಯಾಳ್ ಬಹು ನಿರೀಕ್ಷೆಯ ಸರ್ಕಸ್ ಚಿತ್ರ ಯಾಕೋ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಬರುವ ರೈಲಿನ ದೃಶ್ಯಗಳನ್ನು ಛಾಯಾಗ್ರಾಹಕ ಶೇಖರ್ ಚಂದ್ರ ಅವರು ಅದ್ಬುತವಾಗಿ ಸೆರೆಹಿಡಿದಿದ್ದರು. ಆದರೆ ಚಿತ್ರ ಮಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಈಗ ಹರಿಕಥೆ ಏನಾಗುತ್ತದೋ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುಂದರ ಬೆಡಗಿಯ ಹೆಸರು ಸಂಚಿತಾ ಪಡುಕೋಣೆ. ಹಾಗಾಂತ ದೀಪಿಕಾ ಪಡುಕೋಣೆ ತಂಗಿಯಲ್ಲ ಈಕೆ. ಈಗ ತಾನೇ ಗಾಂಧಿ ನಗರಕ್ಕೆ ಎಂಟ್ರಿ ಹೊಡೆದ ಈಕೆಗೆ ಗಾಂಧಿನಗರದ ಕೆಲ ರಹಸ್ಯ ಅಂಶಗಳ ಬಗ್ಗೆ |
| |
|
|
|
|
|
|