|
| ಜಾಜಿಮಲ್ಲಿಗೆ ಚಿತ್ರದ ಒನ್‌ಲೈನ್ ಸ್ಟೋರಿ |
| ಬುಧವಾರ, 7 ಜನವರಿ 2009 ( 18:34 IST ) | |
ನಾಯಕ ಟೀ-ಬನ್ ಮಾರುತ್ತಿರುತ್ತಾನೆ. ಬೆಡಗಿಯೊಬ್ಬಳು ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡು, ಒಂದಿಷ್ಟು ಆಟ, ಆಡುತ್ತಾಳೆ. ಕೊನೆಗೆ ಹುಡುಗ ನ್ಯಾಯಾಲಯದ ಕಟಕಟೆ ಏರುತ್ತಾನೆ. ನ್ಯಾಯ ಕೊಡಿಸಿ ಜಡ್ಜಮ್ಮ ಎಂದು ಗೋಗರೆಯುತ್ತಾನೆ. ಇದು ಜಾಜಿ ಮಲ್ಲಿಗೆ ಚಿತ್ರದ ಒನ್ ಲೈನ್ ಸ್ಟೌರಿ. ವಿದೇಶದಲ್ಲಿ ಚಿತ್ರೀಕರಣ ಮಾಡಿ ಚಿತ್ರತಂಡ ಬೆಂಗಳೂರಿಗೆ ಮರಳಿದೆ.
ತಾಜ್ ಮಹಲ್ ಚಿತ್ರದ ನಾಯಕ ಅಜಯ್ ಈ ಚಿತ್ರದಲ್ಲಿ ನಾಯಕ. ಗೌರಿ ಮುಂಜಾಲ್ ನಾಯಕಿ. ಈಗಷ್ಟೇ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ಅಜಯ್ ಚಿತ್ರದ ಬಗ್ಗೆ ವಿಶ್ವಾಸದಿಂದ ಮಾತನಾಡುತ್ತಾರೆ. ಕನ್ನಡದಲ್ಲಿ ಈ ರೀತಿಯ ಸಿನಿಮಾಗಳು ಬಂದಿಲ್ಲ. ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ಆ ಹುಡುಗಿ ವಿರುದ್ಧ ಕೋರ್ಟ್ನಲ್ಲಿ ದಾವೆ ಹೂಡುವುದೇ ಚಿತ್ರದ ಹೈಲೈಟ್ ಎನ್ನುತ್ತಾರೆ ಅಜಯ್.
ಇದು ತಮಿಳಿನ ದೇವತೈ ಕಣ್ಣೈ ಚಿತ್ರದ ರೀಮೇಕ್. ಚಿತ್ರದಲ್ಲಿ ಕೋಮಲ್, ಬುಲೆಟ್ ಪ್ರಕಾಶ್ ಹಾಗೂ ನಾಗಶೇಖರ್ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಡ್ಜಮ್ಮನಾಗಿ ನಟಿ ಜಯಮಾಲಾ ನಟಿಸಿದ್ದಾರೆ. ಕೆಲವು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿರುವ ಇವರು ಹಿಂದೆ ನವಶಕ್ತಿ ವೈಭವ ಚಿತ್ರದಲ್ಲಿ ದೇವಿಯಾಗಿ ನಟಿಸಿದ್ದರು. ಚಿತ್ರವನ್ನು ಅಣಜಿ ನಾಗರಾಜ್ ನಿರ್ಮಿಸಿದ್ದು, ಸಾಧುಕೋಕಿಲ ಸಂಗೀತವಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ |
| |
|
|
|
|
|
|
|