ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಟ್ರಿಬ್ಯುನಲ್‌ಗೆ ಸುನಾಮಿ
ಮಂಗಳವಾರ, 6 ಜನವರಿ 2009   ( 20:11 IST )
ಚಿತ್ರ ನಿರ್ಮಾಣದ ಕೊನೆಯಲ್ಲಿ ಹೆಚ್ಚಿನ ಚಿತ್ರಗಳಿಗೆ ಸೆನ್ಸಾರ್ ಸಮಸ್ಯೆ ಎದುರಾಗುತ್ತದೆ. ತಾವು ಇಷ್ಟಪಟ್ಟ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕುವಾಗ ನಿರ್ದೇಶಕರಿಗೆ ಹೊಟ್ಟೆ ಉರಿ ಬರುವುದು ಸಹಜ. ಇತ್ತೀಚೆಗೆ ಸೆನ್ಸಾರ್‌‌ನೊಂದಿಗೆ ವಿವಾದ ಮಾಡಿಕೊಂಡು 'ಮೊಗ್ಗಿನ ಮನಸು' ಚಿತ್ರ ದೆಹಲಿಯ ಟ್ರಿಬ್ಯುನಲ್ ಮೊರೆ ಹೋಯಿತು. ಈಗ ಮತ್ತೊಂದು ಚಿತ್ರ ಟ್ರಿಬ್ಯುನಲ್ ಮೊರೆ ಹೋಗಿದೆ. ಅದು ಸುನಾಮಿ.

ರಾಜು ಪಾಟೀಲ್ ನಿರ್ಮಾಣದ 'ಸುನಾಮಿ'ಳಿ ಚಿತ್ರಕ್ಕೂ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಅಪ್ಪಳಿಸಿದ ಭೀಕರ ಸುನಾಮಿ ದುರಂತಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ಚಿತ್ರದಲ್ಲಿ ಹಿಂಸೆಯನ್ನು ವಿಜೃಂಭಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದೆ. ಇದರಿಂದ ಬೇಸತ್ತ ನಿರ್ಮಾಪಕರು ಈಗ ದೆಹಲಿ ಟ್ರಿಬ್ಯುನಲ್ ಮೊರೆ ಹೋಗಿದ್ದಾರೆ. ಅಲ್ಲಿಂದ ತೀರ್ಪು ಬಂದು ಚಿತ್ರ ಬಿಡುಗಡೆಗೆ ಇನ್ನೂ ಕೆಲಕಾಲ ಕಾಯಬೇಕು.

ಈ ಚಿತ್ರವನ್ನು ಮಾಕಂ ಮನೋಹರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸದ್ಗುಣರಾಜರ ಸಂಗೀತವಿದೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು, ಕೌರವ್ ವೆಂಕಟೆಶ್ ಹಾಗೂ ಟೈಗರ್ ಮಧು ಸಾಹಸ ಸಂಯೋಜಿಸಿದ್ದಾರೆ. ತಾರಾಬಳಗದಲ್ಲಿ ರಾಜ, ಪೂನಂ, ರಂಗಾಯಣ ರಘು, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಬುಲೆಟ್ ಪ್ರಕಾಶ್, ರೇಖಾದಾಸ್ ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಚ್ಚಾ ಹುಚ್ಚು
ಅಭಯ್‌ಗೆ ನಾಯಕಿಯಾಗಿ ಬಂದ ಆರತಿ
ಮಂಜಣ್ಣ ಮತ್ತೊಮ್ಮೆ ಗರಂ
ಸುರಿಯಲಿದೆ ವರ್ಷಧಾರೆ
ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ
ವಿಜಯ್ ರಾಘವೇಂದ್ರಗೆ ಪುತ್ರ ಭಾಗ್ಯ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...