|
| ಮಚ್ಚಾ ಹುಚ್ಚು |
| ಮಂಗಳವಾರ, 6 ಜನವರಿ 2009 ( 20:07 IST ) | |
ಹೊಸ ಚಿತ್ರಗಳಿಗೆ ಮಾರ್ಕೆಟ್ ಇಲ್ಲ. ಹೊಸಬರ ಚಿತ್ರಗಳ ವಿತರಣೆಯ ಹಕ್ಕನ್ನು ಪಡೆಯಲು ವಿತರಕರು ಮುಂದೆ ಬರುತ್ತಿಲ್ಲ ಎಂಬ ಮಾತಿದೆ. ಆದರೆ 'ಮಚ್ಚಾ' ಚಿತ್ರ ಮಾತ್ರ ಇದಕ್ಕೆ ಹೊರತಾಗಿದೆ. ಮಚ್ಚಾದ ಚಿತ್ರ ಪೋಸ್ಟರ್ ಹಾಗೂ ನಟ ಜೀವನ್ ನಿಲುವು ನೋಡಿ ವಿತರಕರು ಮುಂದೆ ಬಂದಿದ್ದಾರೆ. ಆದರೆ ಚಿತ್ರದ ಮೊದಲ ಪ್ರತಿ ಬಂದ ಮೇಲಷ್ಟೇ ಲೆಕ್ಕಾಚಾರ ಎಂಬುದು ಚಿತ್ರತಂಡದ ಅಭಿಪ್ರಾಯ.
ಚಿತ್ರಕ್ಕೆ ಈಗಾಗಲೇ ರೀರೆಕಾರ್ಡಿಂಗ್ ಮುಗಿದಿದ್ದು, ಜನವರಿ ಅಂತ್ಯದಲ್ಲಿ ಬಿಡುಗಡೆಯಾಗುತ್ತಿದೆ. ಕಳೆದ ಒಂದು ವರ್ಷದಿಂದಲೂ ಚಿತ್ರೀಕರಣ ನಡೆಸಿ 30 ದಿನ ರೀರೆಕಾರ್ಡಿಂಗ್ ಮಾಡಿದ್ದೇವೆ. ಪೂರ್ವಭಾವಿಯಾಗಿ ಚಿತ್ರ ನೋಡಿದ್ದೇನೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಎಂಬ ಕಾರಣಕ್ಕೆ ಚಿತ್ರ ಚೆನ್ನಾಗಿ ಬರುತ್ತಿದೆ ಎಂದು ಹೇಳುತ್ತಿಲ್ಲ. ಚಿತ್ರ ನೋಡಿರುವ ತಂತ್ರಜ್ಞರು ಮಚ್ಚಾ ಈ ವರ್ಷದ ಹಿಟ್ ಚಿತ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ ಎನ್ನುತ್ತಾರೆ ನಾಯಕ ಜೀವನ್.
ಜೀವನ್ ಮಚ್ಚಾ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 'ಮಚ್ಚಾಗೂ ಮುನ್ನ ತೆಲುಗಿನ ಅಲ್ಲು ಅರವಿಂದ್ ಜತೆ ನಟಿಸಲು ಆಫರ್ ಬಂದಿತ್ತು. ಆದರೆ ಕನ್ನಡಿಗನಾಗಿ ಮೊದಲು ಕನ್ನಡ ಚಿತ್ರದಲ್ಲಿ ನಟಿಸಬೇಕು ಎಂದು ಅದನ್ನು ನಿರಾಕರಿಸಿದೆ. ಮಚ್ಚಾದಲ್ಲಿ ಮನಸ್ಸಿಟ್ಟು ಅಭಿನಯಿಸಿದ್ದೇನೆ. ಚಳಿ ಬಿಟ್ಟು ಸಾಹಸ ದೃಶ್ಯಗಳಲ್ಲಿ ಗುದ್ದಾಡಿದ್ದೇನೆ. ಚಿತ್ರದ ಟೈಟಲ್ ಮಾಸ್ ಎನಿಸಿದರೂ ನಮ್ಮ ಚಿತ್ರದಲ್ಲಿ ಮಚ್ಚು ಲಾಂಗ್ ಇಲ್ಲ. ಎಲ್ಲೂ ರಕ್ತ ಚೆಲ್ಲುವುದಿಲ್ಲ. ಚಿತ್ರದ ತುಂಬಾ ಲವ್ ಅದರ ಜೊತೆಗೆ ರೌಡಿಸಂ ಇದೆ' ಎಂದು ಚಿತ್ರದ ಬಗ್ಗೆ ಮಾತನಾಡುತ್ತಾರೆ ಜೀವನ್. ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದಾರಂತೆ.
ಅಂದ ಹಾಗೆ ಜೀವನ್ಗೆ ಹಿಂದಿ ಚಿತ್ರವೊಂದರಲ್ಲಿ ನಟಿಸಲು ಅಫರ್ ಬಂದಿದೆ. 15 ಕೋಟಿ ರೂ.ಬಜೆಟ್ನ ಈ ಚಿತ್ರವನ್ನು ಮಾನವ್ ನಿರ್ದೇಶಿಸುತ್ತಿದ್ದಾರೆ. ಸೋನಂ ಕಪೂರ್ ನಾಯಕಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|