ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಅಭಯ್‌ಗೆ ನಾಯಕಿಯಾಗಿ ಬಂದ ಆರತಿ
ಸೋಮವಾರ, 5 ಜನವರಿ 2009   ( 16:36 IST )
ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ ಆಕೆಯನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು.

ಆರತಿ ಮ‌ೂಲತಃ ಕರ್ನಾಟಕದವರು. ಕುಂದಾಪುರದ ಗುಲ್ವಾಡಿಯವರೆಗೂ ಅವರ ಕುಟುಂಬದ ಬೇರೆ ಹಬ್ಬಿಕೊಂಡಿದೆ. ಅಲ್ಲಿನ ಕೊಂಕಣಿ ಮಾತಾಡುವ ಗೌಡ ಸಾರಸ್ವತ ಕುಟುಂಬಕ್ಕೆ ಸೇರಿದವರು. ಈಕೆಯ ತಂದೆ ತಾಯಿ ಅನೇಕ ವರ್ಷ ಶಿವಮೊಗ್ಗದ ಕಾರ್ಪೊರೇಷನ್ ಬ್ಯಾಂಕಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಶಿವಮೊಗ್ಗದ ವಾಸವಿ ವಿದ್ಯಾಶಾಲೆಯಲ್ಲಿ ಆರತಿ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿದ್ದರು. ಆದರೆ ನಂತರ ಮುಂದುವರೆಸಿದ್ದು ಮಾತ್ರ ಮುಂಬೈಯ ತನ್ನ ಸಂಬಂಧಿಕರ ಮನೆಯಲ್ಲಿ.

ಬಿಕಾಂ ಪದವೀಧರೆ ಆರತಿ ಏರೋಬಿಕ್ಸ್ ಕಲಿತಿದ್ದಾರೆ. ಸಾಂಪ್ರದಾಯಿಕ ನೃತ್ಯ, ಬ್ಯಾಲೆ ನೃತ್ಯಗಳನ್ನು ಅಭ್ಯಸಿಸಿದ್ದಾರೆ. ಫಿಟ್ನೆಸ್ ಟೀಚರ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವವಿದೆ. ವಿವಾಹಿತೆಯಾಗಿರುವ ಆರತಿಯ ಪತಿಯ ಹೆಸರು ದೀಪಕ್ ಠಾಕೂರ್. ಮುಂಬೈಯಲ್ಲಿ ಬಿಸಿನೆಸ್ ಮ್ಯಾನ್. ಮಾರ್ಚ್ 25, 2006 ರಂದು, ನೋ ಮಾರ್ಕ್ಸ್ ಮಿಸ್ ಇಂಡಿಯಾ ಕೀರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 75ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿರುವ ಆರತಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲರಂತೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಂಜಣ್ಣ ಮತ್ತೊಮ್ಮೆ ಗರಂ
ಸುರಿಯಲಿದೆ ವರ್ಷಧಾರೆ
ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ
ವಿಜಯ್ ರಾಘವೇಂದ್ರಗೆ ಪುತ್ರ ಭಾಗ್ಯ
ಹೊಸ ವರ್ಷಕ್ಕೆ ಗಣೇಶ್ ಹೊಸ ಸಂಕಲ್ಪ
ಶಿವರಾಜ್ ಅಭಿನಯದ 'ನಂದ' ಬಿಡುಗಡೆಗೆ ಸಿದ್ಧ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬೆಂಬಲಿಗರ ಜತೆ ಸಿದ್ದು ಹೊಸ ಪಕ್ಷದ ಚಿಂತನೆ
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಂದಿನಿಂದ ಪಕ್ಷದಲ್ಲಿ ಎಲ್ಲವೂ ಸರಿಯಿದ್ದ ....
ಮುಂಬೈ ದಾಳಿಗೆ ಮಲ್ಪೆ ಬೋಟ್ ಖರೀದಿ ಯತ್ನ
ಇಂದು ಮಧ್ಯರಾತ್ರಿಯಿಂದ ಟ್ರಕ್ ಮಾಲೀಕರ ಮುಷ್ಕರ
ಮನರಂಜನೆ
ಚಿತ್ರ ಸುದ್ದಿ - ನಟ ವಿಜಯರಾಘವೇಂದ್ರ ತಂದೆಯಾಗಿದ್ದಾರೆ. ಇದ್ಯಾವುದೇ ಚಿತ್ರದಲ್ಲಿ ಅಲ್ಲ. ಬದಲಾಗಿ ರಿಯಲ್ ಲೈಫ್‌ನಲ್ಲಿ. ಡಿ. 31 ರ ರಾತ್ರಿ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ
ಮುಂದೆ ಓದಿ|ಮತ್ತಷ್ಟು...