ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಮಂಜಣ್ಣ ಮತ್ತೊಮ್ಮೆ ಗರಂ
5 ಜನವರಿ 2009   ( 16:34 IST )
ನಮ್ಮ ಮಂಜಣ್ಣ ಮತ್ತೊಮ್ಮೆ ಗರಂ ಆಗಿದ್ದಾರೆ. ಈ ಬಾರಿ ಅವರಲ್ಲಿ ಕನ್ನಡದ ಪ್ರೇಮ ತುಂಬಿದೆ. ಘಜಿನಿ ಚಿತ್ರವನ್ನು ವಿತರಣೆ ಮಾಡಿದ ಬಹಾರ್ ಫಿಲಂಸ್ ಭಾಷಾ ವಿರುದ್ಧ ಸಿಡಿದೆದ್ದಿದ್ದಾರೆ. ಹಿಂದಿ, ಮರಾಠಿ, ಅಸ್ಸಾಮಿ ಸಿನಿಮಾಗಳು ಈಗಾಗಲೇ ಕನ್ನಡವನ್ನು ನುಂಗಿ ನೀರು ಕುಡಿದಿವೆ.

ಈಗ ಕನ್ನಡ ಸಿನಿಮಾಗಳ ತಿಥಿ ಮಾಡಲು ಬರುತ್ತಿವೆ ಎನ್ನುವ ಮಂಜಣ್ಣ, ಅದಕ್ಕೆ ಭಾಷಾನಂತವರು ಬೆಂಬಲ ಕೊಡುತ್ತಾರೆ. ಕನ್ನಡ ಸಿನಿಮಾ ಓಡುವ ಥಿಯೇಟರ್‌ಗಳಲ್ಲಿ ಘಜಿನಿ ಗರ್ಜನೆ ಕೇಳಿಬರುತ್ತಿದೆ. ಇದೇ ರೀತಿಯಾದರೆ ಕೆ.ಜಿ.ರಸ್ತೆಯಲ್ಲಿ ಸಲ್ಮಾನ್, ಶಾರುಖ್ ಫೋಟೋಗಳು ರಾರಾಜಿಸುತ್ತವೆ. ಹೀಗಾದರೆ ಹೇಗೆ ಎಂದು ಮಂಜಣ್ಣ ಪ್ರಶ್ನಿಸುತ್ತಾರೆ.

ಅಂದ ಹಾಗೆ ಮಂಜಣ್ಣನಿಗೆ 2008 ವರ್ಷ ಅಷ್ಟೊಂದು ಒಳ್ಳೆಯದಲ್ಲ. 2009 ಇವರ ವರ್ಷ ಎಂದು ಜ್ಯೋತಿಷಿಗಳು ಹೇಳಿದ್ದರಿಂದ ಅವರ ಹೆಚ್ಚಿನ ಎಲ್ಲ ಚಿತ್ರಗಳನ್ನು ಈ ವರ್ಷದಲ್ಲೇ ಬಿಡುಗಡೆಗೊಳಿಸುತ್ತಾರಂತೆ. ಒಲವೇ ಜೀವನ ಲೆಕ್ಕಾಚಾರ, ಯೋಗಿ, ನಾನೇ ಬೇರೆ ನನ್ನ ಸ್ಟೈಲೇ ಬೇರೆ, ಮತ್ತೊಂದು ಗಣೇಶ್, ಶಿವಣ್ಣ ಅಭಿನಯದ ಚಿತ್ರಗಳನ್ನು 2009 ರಲ್ಲೇ ಬಿಡುಗಡೆ ಮಾಡುತ್ತಾರಂತೆ.

ಕನ್ನಡ ಚಿತ್ರರಂಗದ ನಿರ್ಮಾಪಕರಲ್ಲಿ ಮಂಜಣ್ಣ ಏಕ ಕಾಲದಲ್ಲಿ 2-3 ಚಿತ್ರಗಳನ್ನು ನಿರ್ಮಿಸುವ ಸಾಮರ್ಥ್ಯವುಳ್ಳ ಶ್ರೀಮಂತ ನಿರ್ಮಾಪಕರು. ಇತ್ತೀಚೆಗೆ ಇವರ ನಿರ್ಮಾಣದ 'ಅರಮನೆ' ಚಿತ್ರ ಶತದಿನ ಆಚರಿಸಿತು. ಅಂದಹಾಗೆ ಮಂಜು ನಿರ್ಮಾಣದ ರಾಜ್‌ಕುಮಾರಿ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಿಖಿತಾ, ಬಾಲಾಜಿ ಹಾಗೂ ರವಿಚಂದ್ರನ್ ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಭಯ್‌ಗೆ ನಾಯಕಿಯಾಗಿ ಬಂದ ಆರತಿ
ಸುರಿಯಲಿದೆ ವರ್ಷಧಾರೆ
ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ
ವಿಜಯ್ ರಾಘವೇಂದ್ರಗೆ ಪುತ್ರ ಭಾಗ್ಯ
ಹೊಸ ವರ್ಷಕ್ಕೆ ಗಣೇಶ್ ಹೊಸ ಸಂಕಲ್ಪ
ಶಿವರಾಜ್ ಅಭಿನಯದ 'ನಂದ' ಬಿಡುಗಡೆಗೆ ಸಿದ್ಧ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬೆಂಬಲಿಗರ ಜತೆ ಸಿದ್ದು ಹೊಸ ಪಕ್ಷದ ಚಿಂತನೆ
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಂದಿನಿಂದ ಪಕ್ಷದಲ್ಲಿ ಎಲ್ಲವೂ ಸರಿಯಿದ್ದ ....
ಮುಂಬೈ ದಾಳಿಗೆ ಮಲ್ಪೆ ಬೋಟ್ ಖರೀದಿ ಯತ್ನ
ಇಂದು ಮಧ್ಯರಾತ್ರಿಯಿಂದ ಟ್ರಕ್ ಮಾಲೀಕರ ಮುಷ್ಕರ
ಮನರಂಜನೆ
ಚಿತ್ರ ಸುದ್ದಿ - ನಟ ವಿಜಯರಾಘವೇಂದ್ರ ತಂದೆಯಾಗಿದ್ದಾರೆ. ಇದ್ಯಾವುದೇ ಚಿತ್ರದಲ್ಲಿ ಅಲ್ಲ. ಬದಲಾಗಿ ರಿಯಲ್ ಲೈಫ್‌ನಲ್ಲಿ. ಡಿ. 31 ರ ರಾತ್ರಿ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ
ಮುಂದೆ ಓದಿ|ಮತ್ತಷ್ಟು...