ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಸುರಿಯಲಿದೆ ವರ್ಷಧಾರೆ
ಸೋಮವಾರ, 5 ಜನವರಿ 2009   ( 16:30 IST )
ವರ್ಷದಾರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೊಬ್ಬ ಲಂಬೂ ನಟನ ಆಗಮನವಾಗುತ್ತಿದೆ. ಈ ಚಿತ್ರದಲ್ಲಿ ಎಂಟು ಅಡಿ ಎತ್ತರದ ಸಂತೋಷ್ ಎಂಬ ನಟ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಖಳನಟರಾಗಿರುವ ಸಂತೋಷ್‌ಗೆ ಸುಪಾರಿ ನೀಡಿದ ವಿರೋಧಿ ಪಡೆ ನಾಯಕ ಮಿಥುನ್ ತೇಜಸ್ವಿ ಹಾಗೂ ಸ್ನೇಹಿತರನ್ನು ಮುಗಿಸಲು ಸೂಚಿಸುವ ಸನ್ನಿವೇಶವನ್ನು ಚಿತ್ರಕ್ಕಾಗಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.

ರಾಜರಾಜೇಶ್ವರಿ ನಗರದಲ್ಲಿ ನಡೆದ ಹೊಡೆದಾಟದ ದೃಶ್ಯವನ್ನು ನಿರ್ದೇಶಕ ವೇಮಗಲ್ ಜಗನ್ನಾಥ್ ಚಿತ್ರೀಕರಿಸಿಕೊಂಡರು. ಈ ವಿಶಿಷ್ಟ ಫೈಟ್ ಚಿತ್ರದ ಹೈಲೈಟ್ ಆಗಲಿದೆ ಎನ್ನುತ್ತಾರೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು. ಪಿ.ರಾಮಸ್ವಾಮಿ ಹಾಗೂ ಸಂಧ್ಯಾವೆಂಕಟೇಶ್ ನಿರ್ಮಿಸುತ್ತಿರುವ ವರ್ಷಧಾರೆ, ವೇಮಗಲ್ ನಿರ್ದೇಶನದ 10ನೇ ಚಿತ್ರ.

ದೇವರಾಜ್ ಛಾಯಾಗ್ರಹಣವಿರುವ 'ವರ್ಷಧಾರೆ'ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್ ತೇಜಸ್ವಿ ಸೂರಜ್, ಪಾಯಲ್ ಘೋಷ್, ಅಶಿಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಿಥುನ್ ತೇಜಸ್ವಿ ಹಾಗೂ ಸೂರಜ್ ಬ್ರೇಕ್‌ಗಾಗಿ ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ
ವಿಜಯ್ ರಾಘವೇಂದ್ರಗೆ ಪುತ್ರ ಭಾಗ್ಯ
ಹೊಸ ವರ್ಷಕ್ಕೆ ಗಣೇಶ್ ಹೊಸ ಸಂಕಲ್ಪ
ಶಿವರಾಜ್ ಅಭಿನಯದ 'ನಂದ' ಬಿಡುಗಡೆಗೆ ಸಿದ್ಧ
ತರುಣ್ ನಟನೆಯ 'ಸೀನ' ಧ್ವನಿ ಸುರುಳಿ ಬಿಡುಗಡೆ
ಅಕ್ಕ-ತಂಗಿಯೊಂದಿಗೆ ಮಹೇಂದರ್
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬೆಂಬಲಿಗರ ಜತೆ ಸಿದ್ದು ಹೊಸ ಪಕ್ಷದ ಚಿಂತನೆ
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಂದಿನಿಂದ ಪಕ್ಷದಲ್ಲಿ ಎಲ್ಲವೂ ಸರಿಯಿದ್ದ ....
ಮುಂಬೈ ದಾಳಿಗೆ ಮಲ್ಪೆ ಬೋಟ್ ಖರೀದಿ ಯತ್ನ
ಇಂದು ಮಧ್ಯರಾತ್ರಿಯಿಂದ ಟ್ರಕ್ ಮಾಲೀಕರ ಮುಷ್ಕರ
ಮನರಂಜನೆ
ಚಿತ್ರ ಸುದ್ದಿ - ನಟ ವಿಜಯರಾಘವೇಂದ್ರ ತಂದೆಯಾಗಿದ್ದಾರೆ. ಇದ್ಯಾವುದೇ ಚಿತ್ರದಲ್ಲಿ ಅಲ್ಲ. ಬದಲಾಗಿ ರಿಯಲ್ ಲೈಫ್‌ನಲ್ಲಿ. ಡಿ. 31 ರ ರಾತ್ರಿ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ
ಮುಂದೆ ಓದಿ|ಮತ್ತಷ್ಟು...