|
| ಅಮೆರಿಕಾದಿಂದ ಸ್ಯಾಂಡಲ್ ವುಡ್‌ಗೆ |
| ಸೋಮವಾರ, 5 ಜನವರಿ 2009 ( 16:29 IST ) | |
ಸ್ಯಾಂಡಲ್ ಉಡ್‌ನಲ್ಲಿ ಸೆಟ್ಲ್ ಆಗಿ ಉತ್ತಮ ಹೆಸರು ಗಳಿಸುವ ಆಸೆಯೊಂದಿಗೆ 'ವೆಂಕಟ ಇನ್ ಸಂಕಟ' ಚಿತ್ರದ ನಾಯಕಿ ಮೇಘನಾ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಇವರು ಹುಟ್ಟಿ, ಬೆಳೆದು ಓದಿದ್ದು ಎಲ್ಲವೂ ಅಮೆರಿಕಾದಲ್ಲೇ. ಆದರೆ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದು ಮಾತ್ರ ಸ್ಯಾಂಡಲ್ ವುಡ್‌ನಲ್ಲಿ.
ನಾನು ಅಮೆರಿಕಾ ಪ್ರಜೆಯಾದರೂ ಭಾರತೀಯ ಸಂಸ್ಕ್ಕತಿಯನ್ನು ಮೈಗೂಡಿಸಿಕೊಂಡು ಬೆಳೆದವಳು. ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅಲ್ಲಿ ನಾನು ಭಾರತೀಯ ಆಚಾರ ವಿಚಾರಗಳನ್ನು ಬಿಂಬಿಸುವಂತಹ ನಾಟಕ, ನೃತ್ಯಗಳನ್ನು ನೀಡುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರಿಗೆ ಭಾರತೀಯ ಸಂಸ್ಕೃತಿಯ ಕುರಿತು ಪಾಠ ಮಾಡುತ್ತಿದ್ದೆ.
ನಾನು ಬೆಂಗಳೂರಿಗೆ ಬಂದು ಅಭಿನಯ ತರಂಗ ಶಾಲೆಯಲ್ಲಿ ಅಭಿನಯ ಕಲಿಯಲು ಸೇರಿಕೊಂಡೆ. ಅಲ್ಲಿಗೆ ನಿರ್ದೇಶಕ ರಮೇಶ್ ಅರವಿಂದ್ ಅವರು ಬಂದಾಗ ನನ್ನನ್ನು ನೋಡಿ 'ವೆಂಕಟ ಇನ್ ಸಂಕಟ' ಚಿತ್ರದ ನಾಯಕಿಯಾಗಿ ಮಾಡಿಕೊಂಡರು ಎಂದು ಚಿತ್ರರಂಗದ ತಮ್ಮ ಎಂಟ್ರಿಯ ಬಗ್ಗೆ ವಿವರಿಸಿದ್ದಾರೆ. ಮೊದಲಿಗೆ ಕ್ಯಾಮರಾ ಎದುರಿಸುವಾಗ ಸ್ವಲ್ಪ ಭಯವಾಯಿತ್ತಾದರೂ ನಂತರ ಕಡಿಮೆಯಾಯಿತು ಎನ್ನುತ್ತಾರೆ ಮೇಘನಾ.
ಗ್ಲ್ಯಾಮರ್ ಪಾತ್ರಗಳ ಬಗ್ಗೆ ಈ ಬೆಡಗಿ ತಮ್ಮದೇ ಆದ ನಿಲುವು ಇಟ್ಟುಕೊಂಡಿದ್ದಾರೆ. ಗ್ಲ್ಯಾಮರ್ ಹಾಗೂ ಎಕ್ಸ್‌ಪೋಸಿಂಗ್ ಸಿನಿಮಾ ರಂಗದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾನು ಅಂತಹ ಪಾತ್ರಕ್ಕೆ ಅದರಲ್ಲೂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವಂತಹ ಪಾತ್ರಗಳಿಗೆ ಓಕೇನಾ ಎಂದು ಯೋಚಿಸಿ ಪಾತ್ರ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಟ ವಿಜಯರಾಘವೇಂದ್ರ ತಂದೆಯಾಗಿದ್ದಾರೆ. ಇದ್ಯಾವುದೇ ಚಿತ್ರದಲ್ಲಿ ಅಲ್ಲ. ಬದಲಾಗಿ ರಿಯಲ್ ಲೈಫ್‌ನಲ್ಲಿ. ಡಿ. 31 ರ ರಾತ್ರಿ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ |
| |
|
|
|
|
|
|
|