ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಅಕ್ಕ-ತಂಗಿಯೊಂದಿಗೆ ಮಹೇಂದರ್
ಶನಿವಾರ, 3 ಜನವರಿ 2009   ( 17:48 IST )
ಬಾಲ್ಯದಲ್ಲಿ ಬಹುತೇಕ ಮಕ್ಕಳು ಕೇಳಿದ ಗೋವಿನ ಹಾಡು ಮತ್ತು ಬದುಕಿಗೆ ಬುನಾದಿಯಾದ ಹಳ್ಳಿ ಜೀವನ ಇವೆರಡರ ಸಮ್ಮಿಶ್ರಣವಾದ 'ಅಕ್ಕ-ತಂಗಿ' ಚಿತ್ರ ಯಶಸ್ಸಿಗೆ ಕೆಲವೇ ಮೆಟ್ಟಿಲುಗಳು ಬಾಕಿ- ಹೀಗೆಂದವರು ನಿರ್ದೇಶಕ ಎಸ್.ಮಹೇಂದರ್.

ಜೀವಮಾನದಲ್ಲಿ ಗಲ್ಲಾಪೆಟ್ಟಿಗೆ ಭರ್ತಿ ಮಾಡಲು ಮೌಲ್ಯವನ್ನು ಕಳೆದುಕೊಳ್ಳಲಿಲ್ಲ ಎನ್ನುವ ಮಹೇಂದರ್, ಈ ಚಿತ್ರದ ಹಿಂದೆ ಯಾವುದೇ ಪ್ರಶಸ್ತಿ ಬಾಚುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ ಕೊಡುತ್ತಾರೆ.

ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದಿದೆ. ಕನ್ನಡಿಗರು ಯಾವತ್ತಿಗೂ ಸ್ಮರಿಸಿಕೊಳ್ಳುವಂತಹ ಚಿತ್ರಗಳನ್ನೇ ಕೊಟ್ಟಿದ್ದೇನೆ. ಎಲ್ಲಾ ಚಿತ್ರಗಳಲ್ಲೂ ಗ್ರಾಮೀಣ ಸೊಗಡು, ಒಂದಷ್ಟು ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದೇನೆ. ಹಾಗೆಯೇ ಸಮಾಜದಲ್ಲಿ ಕಣ್ಮರೆಯಾಗುತ್ತಿರುವ ಅವಿಭಕ್ತ ಕುಟುಂಬದ ಕಥೆ 'ಅಕ್ಕ-ತಂಗಿ' ಎನ್ನುತ್ತಾರೆ ಮಹೇಂದರ್.

ಅಕ್ಕ-ತಂಗಿ ಚಿತ್ರದ ಪ್ರತಿ ದೃಶ್ಯವೂ ಚೆನ್ನಾಗಿ ಮ‌ೂಡಿಬಂದಿದೆ ಎನ್ನುವ ಅವರು, ಜಾನಪದ ಸೊಗಡಿನ ಕೊಳ್ಳೇಗಾಲ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ ಎನ್ನುತ್ತಾರೆ. ರಾಜ್ಯದ 15 ಕೇಂದ್ರಗಳಲ್ಲಿ ಅಕ್ಕ-ತಂಗಿ ಬಿಡುಗಡೆಯಾಗಿದೆ. ಟಿವಿ ಮುಂದೆ ಕುಳಿತಿರುವ ಮಹಿಳೆಯರನ್ನು ಚಿತ್ರಮಂದಿರಕ್ಕೆ ಕರೆತರಲೆಂದೇ ಮಹಿಳಾ ಪ್ರಧಾನ ಚಿತ್ರ ತಯಾರಿಸಿದೆ ಎನ್ನುವ ಮಹೇಂದರ್, ಸಂಕ್ರಾಂತಿಯ ನಂತರ ಮತ್ತೊಂದು ಚಿತ್ರ ನಿರ್ದೇಶಿಸಲಿದ್ದಾರಂತೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂದಿನ ವಾರ ತೆರೆಗೆ ಕೆಂಪ
ಸಾಧು ಮನದ ಮಾತು
ಚೇತನ್ ಬಿರುಗಾಳಿ
ಬಿಯಾಂಕಾ ಇಲ್ಲಿ ಕಿಸ್ ಕೊಡಲ್ಲವಂತೆ
ರೀರೆಕಾರ್ಡಿಂಗ್‌ನಲ್ಲಿ ದುಬೈ ಬಾಬು
ಮಾನಸಿಯ ಮನಸು ಅರಳಿದೆ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...