|
| ಚೇತನ್ ಬಿರುಗಾಳಿ |
| ಶುಕ್ರವಾರ, 2 ಜನವರಿ 2009 ( 19:19 IST ) | |
ಆ ದಿನಗಳು ಚಿತ್ರದ ಮೂಲಕ ಬೆಳಕಿಗೆ ಬಂದ ಚೇತನ್ ಈಗ ಬಿರುಗಾಳಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಒಂದು ಚಿತ್ರದ ನಂತರ ಒಂದು ವರ್ಷ ಬ್ರೇಕ್ ತಗೊಂಡಿದ್ದಾರೆ. 'ದೊಡ್ಡ ಸ್ಟಾರ್ ಎನಿಸಿಕೊಳ್ಳಬೇಕೆನ್ನುವ ಆಕಾಂಕ್ಷೆ ನನಗಿಲ್ಲ. ಪ್ರೇಕ್ಷಕರಿಗೆ ಮೆಚ್ಚುಗೆಯಾಗುವಂಥ ಉತ್ತಮ ಕಲಾವಿದನಾಗಿ ರೂಪುಗೊಳ್ಳಬೇಕಷ್ಟೆ. ನಾನು ಉತ್ತಮ ತಂತ್ರಜ್ಞರೊಂದಿಗೆ ಕೆಲಸ ಮಾಡಲು ಇಚ್ಚಿಸುತ್ತೇನೆ' ಎನ್ನುತ್ತಾರೆ ಚೇತನ್.
ಬೆಳ್ಳಿತೆರೆಗೆ ತಮ್ಮನ್ನು ಪರಿಚಯಿಸಿದ 'ಆ ದಿನಗಳು' ಚಿತ್ರದ ಬಗ್ಗೆ ಅವರು ತುಂಬಾ ಪ್ರೀತಿಯಿಂದ ಮಾತನಾಡುತ್ತಾರೆ. ಚೊಚ್ಚಲ ಚಿತ್ರದಲ್ಲೇ ಉತ್ತಮ ತಂತ್ರಜ್ಞರೊಂದಿಗೆ ಕೆಲಸ ಮಾಡುವ ಅವಕಾಶ ತಮ್ಮದಾಯ್ತು.ಇದೀಗ ಬಿರುಗಾಳಿ ಚಿತ್ರದಲ್ಲಿ ತಮಗೆ ಎಲ್ಲವೂ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಬಿರುಗಾಳಿ ಸಂಪೂರ್ಣ ಮನರಂಜನಾತ್ಮಕ ಕಮರ್ಷಿಯಲ್ ಸಿನಿಮಾ. ಈಗಿನ ಪ್ರೇಕ್ಷಕರಿಗೆ ಏನು ಬೇಕೋ ಎಲ್ಲವೂ ಇಲ್ಲಿದೆ. ಥಿಯೇಟರ್‌ನಲ್ಲಿ ಕುಳಿತ ಪ್ರೇಕ್ಷಕ ಚಿತ್ರದಲ್ಲಿ ಸಂಪೂರ್ಣ ತಲ್ಲೀನನಾಗಿರುತ್ತಾನೆ ಎನ್ನುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಚೇತನ್‌ರ ಮೂರನೇ ಚಿತ್ರ ಸೆಟ್ಟೇರಲಿದೆ. ಆ ದಿನಗಳು ಚಿತ್ರ ನಿರ್ದೇಶನ ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಫೆಬ್ರವರಿ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು |
| |
|
|
|
|
|
|
|