|
| ಬಿಯಾಂಕಾ ಇಲ್ಲಿ ಕಿಸ್ ಕೊಡಲ್ಲವಂತೆ |
ರಾಕಿ ಚಿತ್ರದ ನಾಯಕಿ ಬಿಯಾಂಕಾ ದೇಸಾಯಿಯ ಹಾಗೂ ಆಕೆಯ ನಟನೆಯ ಬಗ್ಗೆ ಪ್ರಶಂಸೆಯ ಮಾತು ಕೇಳಿಬಂದುವು. ಇದರಿಂದ ಬಿಯಾಂಕಾ ಫುಲ್ ಖುಷಿಯಾಗಿದ್ದಾರೆ. ಮುಂದಿನ ಚಿತ್ರದಲ್ಲಿ ಇದಕ್ಕಿಂತ ಚೆನ್ನಾಗಿ ಡ್ಯಾನ್ಸ್ ಮಾಡಬಲ್ಲೆ ಎನ್ನುತ್ತಾರೆ ಈ ಬೆಡಗಿ.
ಈಕೆಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವುದೆಂದರೆ ಸ್ವಲ್ಪ ಕಷ್ಟವಂತೆ. ಈ ವರೆಗೆ ನನಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವ ಅವಕಾಶ ಸಿಕ್ಕದಿರುವುದು ನನ್ನ ಪುಣ್ಯ. ನಾನೇನಾದರೂ ಚುಂಬನ ದೃಶ್ಯದಲ್ಲಿ ನಟಿಸುವುದಾದರೆ ಅದು ಬಾಲಿವುಡ್‌ನ ದೀಪಿಕ ಪಡುಕೋಣೆಯ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜೊತೆ ಎನ್ನುತ್ತಾ ನಾಚುತ್ತಾರೆ ಬಿಂಕದ ಬಿಯಾಂಕಾ.
ಯೋಗಿ ಚಿತ್ರದಲ್ಲಿ ಯೋಗೀಶ್ ಜೊತೆ , ಗುಲಾಮ ಚಿತ್ರದಲ್ಲಿ ಪ್ರಜ್ವಲ್ ಜೊತೆ ನಟಿಸಿರುವ ಈಕೆಯ ಮುತ್ತಿನ ಕನಸು ಈಡೇರಬೇಕಾದರೆ ಈಕೆಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗಬೇಕು. ಆದರೆ ಆ ಅವಕಾಶ ಕೊಡುವವರು ಯಾರು. ಪರಭಾಷಾ ನಟಿಯರಲ್ಲಿ ಪೂಜಾಗಾಂಧಿ ನಂತರ ಕನ್ನಡದಲ್ಲಿ ನಿಖಿತಾ ಹಾಗೂ ಬಿಯಾಂಕಾ ಇಲ್ಲೇ ನೆಲೆಯೂರುವ ಭರವಸೆ ಮೂಡಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು |
| |
|
|
|
|
|
|
|