ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ರೀರೆಕಾರ್ಡಿಂಗ್‌ನಲ್ಲಿ ದುಬೈ ಬಾಬು
ಉಪೇಂದ್ರ ಅಭಿನಯದ ಬುದ್ದಿವಂತ ಚಿತ್ರ ಹಿಟ್ ಆಗುತ್ತಿದ್ದಂತೆ ಮತ್ತೊಂದು ರಿಮೇಕ್ ಚಿತ್ರ ದುಬೈ ಬಾಬು ಬಿಡುಗಡೆಗೆ ಸಿದ್ಧವಾಗಿದೆ. ಅದ್ದೂರಿತನಕ್ಕೆ ಮತ್ತೊಂದು ಹೆಸರಾದ ಶೈಲೇಂದ್ರಬಾಬು ಚಿತ್ರದ ನಿರ್ಮಾಪಕರು. ಈ ಹಿಂದೆ ಇವರ ನಿರ್ಮಾಣದ ಕುಟುಂಬ ಹಾಗೂ ಗೌರಮ್ಮ ಚಿತ್ರಗಳು ಜಯಭೇರಿ ಬಾರಿಸಿವೆ.

ಪ್ರಸ್ತುತ ಶೈಲೇಂದ್ರ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಅಪಾರ ವೆಚ್ಚದಲ್ಲಿ ಮೂಡಿ ಬಂದಿರುವ ದುಬೈ ಬಾಬು ಚಿತ್ರವನ್ನು ದುಬಾರಿ ವೆಚ್ಚದ ಚಿತ್ರವೆಂದೇ ಕರೆಯಲಾಗುತ್ತಿದೆ. ಚಿತ್ರದಲ್ಲಿ ಉಪ್ಪಿಗೆ ನಿಖಿತಾ ಹಾಗೂ ಸಲೋನಿ ನಾಯಕಿಯರಾಗಿ ಸಾಥ್ ನೀಡಿದ್ದಾರೆ. ಹಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ನಟ ಕುಮಾರ್ ಗೋವಿಂದ್ ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಪದರ್ಪಾಣೆ ಮಾಡಿದ್ದಾರೆ.

ವಿದೇಶದಲ್ಲಿ ಮಾತ್ರವಲ್ಲದೆ ಸ್ವದೇಶದ ಮುಂಬೈನಲ್ಲೂ ಬಹುತೇಕ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ನಾಗಣ್ಣ ಅವರ ಚಿತ್ರಕಥೆ, ಸಂಭಾಷಣೆಯಿದೆ.ಮುಂಬೈನ ಜವೇರಿ ಛಾಯಾಗ್ರಹಣವಿದ್ದು, ಮುಸ್ಸಂಜೆ ಮಾತು ವಿ.ಶ್ರೀಧರ್ ಸಂಗೀತ ನೀಡಿದ್ದಾರೆ. ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಾನಸಿಯ ಮನಸು ಅರಳಿದೆ
ಉಪ್ಪಿ ಪರ್ವವಾಗಲಿದೆಯೇ 2009
2009 ಕ್ಕೆ ಸುಸ್ವಾಗತ
ಚೇತನ್ ಈಗ ರವಿಚೇತನ್
ಪೂಜಾಗಾಂಧಿ ಡಬ್
ಮತ್ತೆ ಒಂದಾದ ಜೋಡಿ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದು ಹೊಸ ಪಕ್ಷ: ರಾಜ್ಯದಲ್ಲಿ ಎನ್‌ಡಿಎಗೆ ಬಲ
ರಾಜ್ಯದಲ್ಲಿ ಉಪಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ..
ಆಪರೇಷನ್ ಸಕ್ಸಸ್; ಆಡಳಿತ ವೈಫಲ್ಯ ನಿವಾರಣೆ ಹೇಗೆ?
ಒಕ್ಕಲಿಗರ ಭದ್ರಕೋಟೆ ಉಳಿಸಿಕೊಂಡ ಜೆಡಿಎಸ್
ಮನರಂಜನೆ
ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು
ಮುಂದೆ ಓದಿ|ಮತ್ತಷ್ಟು...