|
| ಮತ್ತೆ ಪ್ರೇಮಾಂಕುರ |
| 3 ಡಿಸೆಂಬರ್ 2008 ( 18:03 IST ) | |
ಕನ್ನಡದಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ನಾಯಕಿ ಪಟ್ಟ ಗಿಟ್ಟಿಸಿಕೊಂಡು ಕನ್ನಡಿಗರ ಮನ ಸೂರೆಗೊಂಡಿದ್ದರು. ಓಂ,ನಮ್ಮೂರ ಮಂದಾರ ಹೂವೇ ಚಿತ್ರದಿಂದ ಹಿಡಿದು ಆಪ್ತಮಿತ್ರ ಚಿತ್ರದವರೆಗೂ ಇವರ ಅಭಿನಯ ಮುಂದುವರಿಯಿತು. ಆದರೆ ಮದುವೆಯಾದ ನಂತರ ಮಾತ್ರ ಪ್ರೇಮಾ ಯಾಕೋ ಚಿತ್ರರಂಗ ಬಿಟ್ಟು ಮನೆ ಸೇರಿಕೊಂಡರು. ಮತ್ತೆ ಚಿತ್ರರಂಗದ ಸಹವಾಸಕ್ಕೆ ಬರಲಿಲ್ಲ.
ಆದರೆ ಈಗ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಅನೇಕ ಆಫರ್‌ಗಳು ಬಂದರೂ ಅದನ್ನು ಒಪ್ಪಲಿಲ್ಲ. ಆದರೆ 'ಶಿಶಿರ' ಚಿತ್ರದ ನಿರ್ದೇಶಕ ಮಂಜು ಸ್ವರಾಜ್ ಮಾತ್ರ ಪ್ರೇಮಾ ಅವರಿಗೆ ಒಪ್ಪುವಂತಹ ಕಥೆ ಮಾಡಿಕೊಂಡು ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದಿದ್ದಾರೆ. ಪ್ರೇಮಾ ಕೂಡಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಓಕೆ ಅಂದಿದ್ದಾರೆ.
ಓಂ ಹಾಗೂ ನಮ್ಮೂರ ಮಂದಾರ ಹೂವೇ ಚಿತ್ರದ ನಟನೆ ಪ್ರೇಮಾರಿಗೆ ಕನ್ನಡದಲ್ಲಿ ಇನ್ನಷ್ಟು ಅಫರ್‌ಗಳು ಸಿಗುವಂತೆ ಮಾಡಿತು. ಈಗ ಶಿಶಿರ ಚಿತ್ರದ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮನ ತಣಿಸಲಿದ್ದಾರೆ. ಶಿಶಿರ ಚಿತ್ರದ ಚಿತ್ರೀಕರಣ ಸೋಮವಾರಪೇಟೆ ಸುತ್ತಮುತ್ತ ನಡೆಯುತ್ತಿದೆ. ಚಿತ್ರದಲ್ಲಿ ಯುಗ ಯುಗಗಳೇ ಸಾಗಲಿ ಚಿತ್ರದ ನಾಯಕ ಯಶಸ್ ಹಾಗೂ ಮೇಘನಾ ನಟಿಸುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|