ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಶ್ರುತಿಯ ಅಕ್ಕ-ತಂಗಿ
ಬುಧವಾರ, 3 ಡಿಸೆಂಬರ್ 2008   ( 18:03 IST )
ಭಾರೀ ಸಮಯದ ನಂತರ ಕಣ್ಣೀರಿನ ತಾರೆ ಶ್ರುತಿ ಅವರ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಬಾರಿ ಅಕ್ಕ-ತಂಗಿ ಚಿತ್ರದಲ್ಲಿ ಯಾವ ರೀತಿ ಮಿಂಚುತ್ತಾರೋ ಗೊತ್ತಿಲ್ಲ. ಆದರೆ ಅವರು ಈ ಚಿತ್ರದ ಬಗ್ಗೆ ತುಂಬಾ ಆಸಕ್ತಿಯಿಂದ ಇದ್ದಾರೆ. ಈ ಚಿತ್ರವನ್ನು ಅವರ ಪತಿ ಎಸ್.ಮಹೇಂದರ್ ನಿರ್ದೇಶಿಸಿದ್ದಾರೆ. ನಾವಿಬ್ಬರು ಜೊತೆಯಾಗಿದ್ದ ಎಲ್ಲ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ ಎನ್ನುತ್ತಾರೆ ಶ್ರುತಿ.

ಜನ ನನ್ನನ್ನು ಇಂದಿಗೂ ಕಣ್ಣೀರಿನ ಬ್ರಾಂಡ್ ಆಗಿಯೇ ಗುರುತಿಸುತ್ತಾರೆ. ಒಬ್ಬ ಕಲಾವಿದೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಪಾತ್ರ ನಿರ್ವಹಿಸುವುದೇ ಧರ್ಮ ಎಂದು ನಂಬಿದ್ದೇನೆ. ಹಾಗಾಗಿ ನಾನು ಕಣ್ಣೀರಿನ ಪಾತ್ರಗಳಿಗೆ ಬ್ರಾಂಡ್ ಆಗಿದ್ದಕ್ಕೆ ಯಾವುದೇ ಬೇಜಾರಿಲ್ಲ ಎನ್ನುತ್ತಾರೆ ಅವರು. ಇವರ ತಂಗಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ.

ಅಕ್ಕ-ತಂಗಿ ಕಣ್ಣೀರಿನ ಕಥೆಯಲ್ಲ. ಇದು ಬಾಳಿನ ಕಥೆ. ಇದೊಂದು ಕಾಮಿಡಿ ಚಿತ್ರವೂ ಹೌದು. ಚಿತ್ರ ನೋಡಿದ ಪ್ರೇಕ್ಷಕರು ನಕ್ಕು ಸುಸ್ತಾಗುವುದರಲ್ಲಿ ಸಂಶಯವಿಲ್ಲ. ಚಿತ್ರದಲ್ಲಿ ವಿಭಿನ್ನ ಭಾಷೆಯನ್ನು ಬಳಸಿದ್ದೇವೆ. ಕನ್ನಡ ನಾಡಿನ ಅಪರೂಪದ ಭಾಷೆಯದು. ಹೆಚ್ಚಿನ ಕನ್ನಡಿಗರು ಅದನ್ನು ಕೇಳಿಯೇ ಇಲ್ಲ. ಇದೇ ನಮ್ಮ ಚಿತ್ರದ ಸರ್‌ಪ್ರೈಸ್ ಎನ್ನುತ್ತಾರೆ ಶ್ರುತಿ. ಯಾವುದಕ್ಕೂ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಾರಾಯಣ್‌ರ ಮತ್ತೊಂದು ಚಿತ್ರ
ಅಂತಿಮ ಹಂತದಲ್ಲಿ ಸರ್ಕಸ್
ಖಳ ನಟನಾದ ಹಾಸ್ಯ ನಟ
ಬಿಡ್ಡನ ಕಣ್ಣೀರ ಕಥೆ
ಬರ್ತಾವ್ನೆ ಪಾನ್ವಾಲ್
ನಿರ್ದೇಶಕನಾದ ನವೀನ್‌‌ಕೃಷ್ಣ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...