|
| ನಾರಾಯಣ್‌ರ ಮತ್ತೊಂದು ಚಿತ್ರ |
| ಬುಧವಾರ, 3 ಡಿಸೆಂಬರ್ 2008 ( 17:04 IST ) | |
ತಮ್ಮ ಮಗನನ್ನು ನಾಯಕನನ್ನಾಗಿಸಲು ಹೋಗಿ 'ಚೈತ್ರದ ಚಂದ್ರಮ' ಚಿತ್ರದಲ್ಲಿ ಕೈ ಸುಟ್ಟುಕೊಂಡ ನಿರ್ದೇಶಕ ಎಸ್.ನಾರಾಯಣ್ ಈಗ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಅವರ ಹೊಸ ಚಿತ್ರಕ್ಕೆ ಡಿ.10 ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಒಂದು ಮೂಲದ ಪ್ರಕಾರ, 'ಚೆಲ್ಲಿದರು ಸಂಪಿಗೆಯ' ಎಂದು ಹೆಸರಿಡಲಾಗಿದೆ.
ಈ ಬಾರಿ ತಮ್ಮ ಚಿತ್ರಕ್ಕೆ ಒರಟ ಚಿತ್ರದ ಪ್ರಶಾಂತರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಪ್ರಶಾಂತ್ ಅದೃಷ್ಟವೂ ಚೆನ್ನಾಗಿದೆ. 'ಒರಟ' ಚಿತ್ರದ ನಂತರ ಬಿಡುಗಡೆಯಾದ 'ಮಹರ್ಷಿ' ಚಿತ್ರ ಸದ್ದು ಮಾಡಲಿಲ್ಲ. ಈ ನಡುವೆ ಅವರು 'ವೆಂಕಿ' ಹಾಗೂ 'ಅಂಜದಿರು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಎಸ್.ನಾರಾಯಣ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ಚಿತ್ರಕ್ಕೆ ನಾಯಕಿ ಇನ್ನೂ ನಿಶ್ಚಯವಾಗಿಲ್ಲ. ಚಿತ್ರದ ಉಳಿದ ತಂತ್ರಜ್ಞರ ಬಗ್ಗೆಯೂ ನಾರಾಯಣ್ ತುಟಿ ಬಿಚ್ಚಿಲ್ಲ. ಈ ನಡುವೆ ಜಗ್ಗೇಶ್ ಹಾಗೂ ನಾರಾಯಣ್ ಅಭಿನಯದ 'ಚಿಕ್ಕಪೇಟೆ ಸಾಚಾಗಳು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚೆಲುವಿನ ಚಿತ್ತಾರದ ಬಂಪರ್ ಹಿಟ್ ಹಾಗೂ ಚಂಡದ ಸಾಧಾರಣದ ಹಿಟ್‌ನಿಂದ ಹುಮ್ಮಸ್ಸಿನಿಂದ ನಿರ್ದೇಶಿಸಿದ ಚೈತ್ರದ ಚಂದ್ರಮ ಬೋರಲು ಬಿದ್ದಿದೆ. ಈಗ ಹೊಸ ಚಿತ್ರ ಏನಾಗುತ್ತದೆ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|