ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಅಂತಿಮ ಹಂತದಲ್ಲಿ ಸರ್ಕಸ್
ಬುಧವಾರ, 3 ಡಿಸೆಂಬರ್ 2008   ( 17:02 IST )
ಗಣೇಶ್ ಹಾಗೂ ಅರ್ಚನಾ ಗುಪ್ತ ಅಭಿನಯದ 'ಸರ್ಕಸ್' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದರ ಹೆಚ್ಚಿನ ಭಾಗ ರೈಲಿನಲ್ಲಿಯೇ ನಡೆದಿದೆ. 'ಬೊಂಬಾಟ್' ಹಾಗೂ 'ಸಂಗಮ' ಚಿತ್ರದ ಸೋಲಿನ ನಂತರ ಗಣೇಶ್ ಸರ್ಕಸ್ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ದಯಾಳ್ ಸ್ವತಃ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.

ಸರ್ಕಸ್ ಚಿತ್ರದಲ್ಲಿ 25 ದಿನ ರೈಲಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಳಗೊಳ ಟೂ ಕೆ.ಆರ್. ನಗರ ನಡುವೆ ಓಡುವ ರೈಲಿನಲ್ಲಿ ಚಿತ್ರೀಕರಣ ಮಾಡಿದ್ದಾರೆ. ರೈಲಿನಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ಕಥೆಗಾಗಿಯೇ ಹೊರತು ಗೆಲ್ಲುತ್ತದೆ ಎಂಬ ನಂಬಿಕೆಗಾಗಿ ಅಲ್ಲ ಎನ್ನುತ್ತಾರೆ ದಯಾಳ್ ಪದ್ಮನಾಭ್.

ರೈಲಿನಲ್ಲಿ ಚಿತ್ರೀಕರಣ ಮಾಡುವುದು ಸುಲಭವಲ್ಲ. ಒಂದು ದಿನದ ಬಾಡಿಗೆ 2 ಲಕ್ಷ 25 ಸಾವಿರ ರೂ. ಕನ್ನಡ ಚಿತ್ರರಂಗದಲ್ಲಿ 25 ದಿನ ರೈಲಿನಲ್ಲಿ ಚಿತ್ರೀಕರಣ ಮಾಡಿದ ಉದಾಹರಣೆಗಳೇ ಇಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲೇ ನಾನು ಮಾಡಿದಷ್ಟು ದಿನ ರೈಲಿನಲ್ಲಿ ಚಿತ್ರೀಕರಣ ಮಾಡಿಲ್ಲ. ದುಬಾರಿಯಾದರೂ ಚಿತ್ರಕಥೆಗೆ ಬೇಕಾಗಿದ್ದರಿಂದ ಸರ್ಕಸ್ ಚಿತ್ರದ ಚಿತ್ರೀಕರಣ ಮಾಡಬೇಕಾಯಿತು ಎಂದು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡರು ದಯಾಳ್.

ಈ ಚಿತ್ರವಾದರೂ ಗಣೇಶ್‌ಗೆ ಬ್ರೇಕ್ ಕೊಡುತ್ತದೊ ಎಂದು ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಖಳ ನಟನಾದ ಹಾಸ್ಯ ನಟ
ಬಿಡ್ಡನ ಕಣ್ಣೀರ ಕಥೆ
ಬರ್ತಾವ್ನೆ ಪಾನ್ವಾಲ್
ನಿರ್ದೇಶಕನಾದ ನವೀನ್‌‌ಕೃಷ್ಣ
ಗೋವಾದಿಂದ ಮರಳಿ..
ರಮ್ಯಾ ಹುಟ್ಟುಹಬ್ಬ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...