|
| ಖಳ ನಟನಾದ ಹಾಸ್ಯ ನಟ |
| ಬೆಂಗಳೂರು, ಮಂಗಳವಾರ, 2 ಡಿಸೆಂಬರ್ 2008 ( 20:04 IST ) | |
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಹೊಂದಿರುವ ನಟ, ನಿರ್ಮಾಪಕ ದ್ವಾರಕೀಶ್ ಚಿತ್ರವೊಂದರಲ್ಲಿ ಖಳನಾಯಕರಾಗಿ ನಟಿಸುತ್ತಿದ್ದಾರೆ. ಈ ವರೆಗೆ ಇವರು ಹಾಸ್ಯ ನಟರಾಗಿ ಅಥವಾ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಅಂಜದಿರು ಚಿತ್ರದಲ್ಲಿ ಖಳನಾಯಕರಾಗಿ ನಟಿಸುತ್ತಿದ್ದಾರೆ.
ಇದೊಂದು ಹೊಸ ಅನುಭವ. ಮನೆಯಲ್ಲಿ ಪತ್ನಿ ಅಂಬುಜಾ ಬೇಡವೆಂದರೂ ಖಳಪಾತ್ರದಲ್ಲಿ ನಟಿಸಲು ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಕಲಾವಿದನಾದವನು ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಆತನಿಗೆ ಇಮೇಜಿನ ಹಂಗಿರಬಾರದು. ಆಗ ಮಾತ್ರ ಆತನೊಳಗಿನ ಕಲಾವಿದ ತೃಪ್ತಿಯಾಗಲು ಸಾಧ್ಯ ಎನ್ನುತ್ತಾರೆ ಅವರು.
ಅಂಜದಿರು ಚಿತ್ರವನ್ನು ಒಪ್ಪಿಕೊಳ್ಳಲು ಮತ್ತೊಂದು ಕಾರಣವೂ ಇದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಹಿರಿಯ ಪೋಷಕ ನಟ ಕೃಷ್ಣೇಗೌಡರ ಪುತ್ರ ಮುರಳಿ. ಕೃಷ್ಣೇಗೌಡರ ಮೇಲಿನ ವಿಶ್ವಾಸ ಹಾಗೂ ಯುವ ನಿರ್ದೇಶಕರಿಗೆ ಪೋತ್ಸಾಹ ನೀಡುವ ಸದುದ್ದೇಶದಿಂದ ಈ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. ಆಪ್ತಮಿತ್ರ ಭಾಗ-2 ನಿರ್ಮಾಣವಾದರೆ ಅದರಲ್ಲಿ ನಾನಂತೂ ಖಂಡಿತಾ ಇರುವುದಿಲ್ಲ. ಅಂಥ ಚಿತ್ರ ಒಮ್ಮೆ ಮಾತ್ರ ಬರಲು ಸಾಧ್ಯ ಎನ್ನುತ್ತಾರೆ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|