|
| ಬರ್ತಾವ್ನೆ ಪಾನ್ವಾಲ್ |
| ಮಂಗಳವಾರ, 2 ಡಿಸೆಂಬರ್ 2008 ( 16:46 IST ) | |
ಆಕಾಶ್, ಅರಸ್ ಹಾಗೂ ಮೆರವಣಿಗೆಯಂತಹ ಮೂರು ಹಿಟ್ ಚಿತ್ರಗಳನ್ನು ಕೊಟ್ಟ ಮಹೇಶ್ ಬಾಬು ನಿರ್ದೇಶನದ ಪರಮೇಶಿ ಪಾನ್ವಾಲ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 3.5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ 80 ದಿನ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಫೈಟಿಂಗ್ ಜೊತೆಗೆ ಅಣ್ಣ-ತಂಗಿ ಸೆಂಟಿಮೆಂಟ್ ಕೂಡಾ ಇದೆ. ಆದರೆ ಅತ್ತೆ-ಸೊಸೆ ಜಗಳ ಕಿರುಕುಳ ಮುಂತಾದ ಯಾವುದೇ ದೃಶ್ಯಗಳಿಲ್ಲ ಎನ್ನುತ್ತಾರೆ ನಿರ್ದೇಶಕ ಮಹೇಶ್ ಬಾಬು.
ಕನ್ನಡ ಚಿತ್ರರಂಗದಲ್ಲಿ ಒಂದು ಚಿತ್ರದಲ್ಲಿ ಮುಖ ತೋರಿಸಿದ ನಾಯಕಿಯನ್ನು ಮಾತನಾಡಿಸುವುದು ಕಷ್ಟ. ಅದರಲ್ಲೂ ಒಂದೆರಡು ಚಿತ್ರ ಹಿಟ್ ಆದರೆ ಅವರ ಸಂಭಾವನೆ ಹಾಗೂ ಇತೆ ವಿಷಯಗಳ ಬಗ್ಗೆ ಮಾತನಾಡುವಾಗಿಲ್ಲ. ಸ್ವಾರ್ ಹೋಟೆಲ್‌ಗಳಲ್ಲೇ ರೂಂ ಮಾಡಬೇಕು ಎಂದು ಕಿರಿಕಿರಿ ಕೊಡುತ್ತಾರೆ. ಈ ರಗಳೆ ಬೇಡವೆಂದು ಮಹೇಶ್ ಬಾಬು ತಮ್ಮ ಚಿತ್ರಕ್ಕೆ ಮುಂಬೈಯಿಂದ ಸುರ್ವಿನ್ ಚಾವ್ಲಾ ಎಂಬ ನಟಿಯನ್ನು ಕರೆ ತಂದಿದ್ದಾರೆ. ಚಿತ್ರದಲ್ಲಿ ಪರಮೇಶಿ ಪ್ರೀತಿಯಿಂದ ಬಂದರೆ ಪಾನ್ ಕೊಡುತ್ತಾನೆ, ಕಿರಿಕಿರಿ ಮಾಡಿದರೆ ಬಾರಿಸ್ತಾನೆ ಎನ್ನುತ್ತಾರೆ ಅವರು.
ನನ್ನ ಮಟ್ಟಿಗೆ ಪ್ರಯತ್ನ ಪಟ್ಟು ಚಿತ್ರ ಮಾಡಿದ್ದೇನೆ. ಹಾಗಾಂತ ಈ ಚಿತ್ರ ಗೆದ್ದೇ ಗೆಲ್ಲುತ್ತೇ. ಆ ರೀತಿ ನಿರ್ದೇಶಿಸಿದ್ದೇನೆ ಎಂದು ಬಂಡಲ್ ಬಿಡುವುದಿಲ್ಲ. ಯಾಕೆಂದರೆ ಗೆಲುವು ಕೊಡುವುದಕ್ಕೆ ಸಾಧ್ಯವಿಲ್ಲ. ಅದು ಘಟಿಸುತ್ತದೆ. ಶಿವಣ್ಣನ ಚಿತ್ರ ನೋಡಲು ಜನ ಯಾವತ್ತಿಗೂ ಕಾತುರದಿಂದಿರುತ್ತಾರೆ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಮಹೇಶ್ ಬಾಬು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|