|
| ನಿರ್ದೇಶಕನಾದ ನವೀನ್‌ಕೃಷ್ಣ |
| 2 ಡಿಸೆಂಬರ್ 2008 ( 16:45 IST ) | |
ಧಿಮಾಕು ಚಿತ್ರದ ಮೂಲಕ ಗಾಂಧಿನಗರದ ಗಮನ ಸೆಳೆದ ನವೀನ್‌ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ. ಹಾಗಾಂತ ಇವರು ಚಿತ್ರ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಿರ್ದೇಶಕ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬದುಕಿನ ವ್ಯಂಗ್ಯಗಳನ್ನು ಕುರಿತು ಇದುವರೆಗೂ ಹಲವಾರು ಚಿತ್ರಗಳು ಬಂದಿವೆ. ಅದರಲ್ಲೂ ಜಗ್ಗೇಶ್ ಅಭಿನಯದ ಚಿತ್ರ ಮಿಸ್ಟರ್ ಬಕ್ರದಲ್ಲಿ ಹಳ್ಳಿಯವನು ಸಿನಿಮಾ ನಟನಾಗಬೇಕು ಎಂದು ಗಾಂಧಿನಗರಕ್ಕೆ ಬಂದು ಹೇಗೆ ಮೋಸ ಹೋಗುತ್ತಾನೆ ಎಂಬುದನ್ನು ತೋರಿಸಲಾಗಿತ್ತು.
ಈಗ ನಿರ್ದೇಶಕ ಎಂಬ ಚಿತ್ರದಲ್ಲಿ ಗಾಂಧಿನಗರದಲ್ಲಿ ನಿರ್ದೇಶಕನನ್ನು ಹೇಗೆ ಕಡೆಗಣಿಸಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟವರು ಶಿವರಾಜ್ ಹೊಸಕೆರೆಹಳ್ಳಿ. ಧಿಮಾಕು ಚಿತ್ರದ ನಂತರ ನವೀನ್ ಕೃಷ್ಣ ತನ್ನ ಅಭಿನಯವನ್ನು ಮೆಚ್ಚಿ ಅನೇಕ ಆಫರ್‌ಗಳು ಬರಬಹುದೆಂದು ಅಂದುಕೊಂಡಿದ್ದರು. ಅದರಂತೆ ಈಗ ಈ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.
ಸಿನಿಮಾ ರಂಗದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಜವಾಬ್ದಾರಿ ನಿರ್ದೇಶಕನದ್ದು. ಆತ ನಿರ್ದೇಶಕರನಾಗುವುದಕ್ಕೆ ಮುನ್ನ ಅನೇಕರ ಬಳಿ ಸಹಾಯಕನಾಗಿ ದುಡಿದು ಹಲವು ತೊಂದರೆಗಳನ್ನು ಅನುಭವಿಸಿ ಆತ ನಿರ್ದೇಶಕನಾಗುತ್ತಾನೆ. ಇದೇ ಕಥಾ ಹಂದರವನ್ನಿಟ್ಟುಕೊಂಡು ಶಿವರಾಜ್ ಚಿತ್ರ ಮಾಡುತ್ತಿದ್ದಾರೆ. ಇವರು ಈ ಹಿಂದೆ ಬೆಳ್ಳಿಬೆಟ್ಟ ಚಿತ್ರ ನಿರ್ದೇಶಿಸಿದ್ದರು. ಇವರ ಹೊಸ ಚಿತ್ರಕ್ಕೆ ಸ್ವಾತಿ ಹಾಗೂ ನವ್ಯರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೆಂಕಟ್ ನಾರಾಯಣ್ ಸಂಗೀತ ಸಂಯೋಜಿಸಿದ್ದು, ಜನವರಿಯಲ್ಲಿ ಚಿತ್ರ ಸೆಟ್ಟೇರಲಿದೆ..
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|