ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಗೋವಾದಿಂದ ಮರಳಿ..
2 ಡಿಸೆಂಬರ್ 2008   ( 16:44 IST )
ಗೋವಾದಲ್ಲಿನ ಚಿತ್ರೋತ್ಸವ ಮುಗಿದಿದೆ. ಕನ್ನಡ ಚಿತ್ರರಂಗದಿಂದ ಅಲ್ಲಿಗೆ ಹೋಗಿದ್ದವರೆಲ್ಲ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಬಾರಿ ಅವರೆಲ್ಲ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಟಿ ತಾರಾ ಹಾಗೂ ವೇಣು ದಂಪತಿ ಗೋವಾದಿಂದ ಬಂದು ಅಲ್ಲಿನ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಂಥದ್ದೊಂದು ಶಿಸ್ತುಬದ್ಧ ಉತ್ಸವ ನೋಡಿದ್ದೇ ಅಪರೂಪ. ಅದರಲ್ಲೂ ಕನ್ನಡಿಗರಿಗೆ ವಿಶೇಷವಾದ ಗೌರವ, ಆದರ, ಆತಿಥ್ಯ ಎಲ್ಲವೂ ಇತ್ತು. ಉಳಿಯಲು ಸಭೆಯಲ್ಲಿ ಕೂರಲು ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿದ್ದರು. ಎಲ್ಲರೂ ಪ್ರೀತಿಯಿಂದ ಉಪಚರಿಸಿದರು. ಕಳೆದ ಬಾರಿ ನಾವು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದೆವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ತಾರಾ ದಂಪತಿ.

ಈ ಬಾರಿ ವೇಣು ಅವರ ಕ್ಯಾಮರಾ ಕೈಚಳಕದ ಬಗ್ಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಗಂಗಾ ಕಾವೇರಿ ಚಿತ್ರದಲ್ಲಿ ಅವರು ಹಿಮಾಲಯವನ್ನು ತೋರಿಸಿದ ಪರಿ ಅದ್ಬುತವಾಗಿದೆ. ಥಿಯೇಟರ್‌ನಲ್ಲೇ ಪ್ರೇಕ್ಷಕ ಚಳಿಯನ್ನು ಅನುಭವಿಸುವಂತಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ. ಚಿತ್ರದ ನಿಜವಾದ ನಾಯಕ ವೇಣು ಎಂದು ಎಲ್ಲರು ಹೇಳುತ್ತಿದ್ದಾರೆ. ಅಂತೂ ಈ ದಂಪತಿ ಈಗ ತುಂಬಾ ಖುಷಿಯಲ್ಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಮ್ಯಾ ಹುಟ್ಟುಹಬ್ಬ
ಹಿಂದಿಗೆ ಸೈನೈಡ್
ಸದ್ಯದಲ್ಲೇ ಹೀರೋವಾಗಿ ಜಗ್ಗೇಶ್ ಪುತ್ರ
ಹೌಸ್‌ಫುಲ್‌ನಲ್ಲಿ ಚಾಪ್ಲಿನ್ ಪ್ರತಿಮೆ
ಗಂಗಾಕಾವೇರಿಯ ಮಲ್ಲಿಕಾ
ಜಾಲಿಡೇಸ್ ಸಮಾರಂಭದಲ್ಲಿ ಗುಪ್‌ಚುಪ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...