|
| ಹಿಂದಿಗೆ ಸೈನೈಡ್ |
| ಬೆಂಗಳೂರು, ಶನಿವಾರ, 29 ನವೆಂಬರ್ 2008 ( 17:45 IST ) | |
ಸೈನೈಡ್ ಚಿತ್ರದ ಹಿಂದಿ ರೀಮೇಕ್ ಸೆಟ್ಟೇರುವುದು ಖಚಿತವಾಗಿದೆ. ಎ.ಎಂ.ಆರ್. ರಮೇಶ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಚಿತ್ರ ಸಂಸ್ಥೆಯಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡ ಚಿತ್ರದಲ್ಲಿ ಕೆಲಸ ಮಾಡಿದ ಅನೇಕರು ಇಲ್ಲಿ ಕೆಲಸ ಮಾಡಲಿದ್ದಾರೆ.
ಆದರೆ ಕನ್ನಡದಲ್ಲಿದ್ದ ಛಾಯಾಗ್ರಾಹಕ ರ್ಯಾಂಡಿ ಅಲ್ಲಿರುವುದಿಲ್ಲ. ಅವರ ಜಾಗಕ್ಕೆ ದ್ವಾರಕಾನಾಥ್ ಬಂದಿದ್ದಾರೆ. ಮೂಲ ಚಿತ್ರಕ್ಕೆ ಚಿತ್ರೀಕರಣ ನಡೆಸಿದ ಜಾಗದಲ್ಲಿಯೇ ಚಿತ್ರೀಕರಣ ನಡೆಸಲಾಗುತ್ತದೆ. ಕಲಾವಿದರ ಆಯ್ಕೆ ನಡೆಯುತ್ತಿದೆ. ಮುಖ್ಯ ಪಾತ್ರದಲ್ಲಿ ಬಾಲಿವುಡ್ ಕಲಾವಿದರು ನಟಿಸಲಿದ್ದಾರೆ.
ಹಿಂದಿ ಅವತರಣಿಕೆಯಲ್ಲಿ ಯಾವ್ಯಾವ ಕಲಾವಿದರು ಇರುತ್ತಾರೆ ಎಂಬುದನ್ನು ನಿರ್ದೇಶಕ ರಮೇಶ್ ಬಹಿರಂಗಪಡಿಸುವುದಿಲ್ಲ. ಜನವರಿ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದೆ. ಇದರ ಮುಹೂರ್ತ ಕೂಡಾ ಬೆಂಗಳೂರಿನಲ್ಲೇ ನಡೆಯುತ್ತಿದೆ ಎಂಬುದು ಮತ್ತೊಂದು ವಿಶೇಷ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|