ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಅಂಧ ಮಕ್ಕಳ ಜತೆ ಪೂಜಾ ಹುಟ್ಟುಹಬ್ಬ
ಬೆಂಗಳೂರು, ಗುರುವಾರ, 9 ಅಕ್ಟೋಬರ್ 2008   ( 15:42 IST )
ನಟಿ ಪೂಜಾಗಾಂಧಿ ಮಂಗಳವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಇದರಲ್ಲೇನು ಅಂತ ವಿಶೇಷವಿಲ್ಲ. ಆದರೆ ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ರಮಣಶ್ರೀ ಅಂಧ ಮಕ್ಕಳ ಶಾಲೆಯಲ್ಲಿ ಆಚರಿಸಿಕೊಂಡರು. ಇದು ಈಗ ಒಂದು ರೀತಿಯ ಫ್ಯಾಶನ್ ಎಂದರೆ ತಪ್ಪಾಗಲಾರದು. ಕಳೆದ ಬಾರಿ ಗಣೇಶ್ ಕೂಡಾ ಇದೇ ಅಂಧರ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರು.

ಈ ಬಾರಿ ಪೂಜಾರ ಹುಟ್ಟುಹಬ್ಬವನ್ನು 'ಅನು' ಚಿತ್ರ ವಿಶೇಷವಾಗಿ ಆಚರಿಸಿತು. ಕಳೆದ ಬಾರಿ ಇದೇ ಪೂಜಾ ಗಾಂಧಿ ತಮ್ಮ ಹುಟ್ಟುಹಬ್ಬವನ್ನು ರಾಜ್ ಕುಮಾರ್ ಇಂಟರ್ನ್ಯಾಷನಲ್‌ನಲ್ಲಿ ಆಚರಿಸಿದ್ದರು. ಕಳೆದ ಬಾರಿಗೂ ಈ ಬಾರಿಗೂ ಪೂಜಾರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಪೂಜಾಗೆ ಕೈ ತುಂಬಾ ಅವಕಾಶಗಳಿವೆ. ಹೆಚ್ಚಿನ ಚಿತ್ರಗಳು ಅಲ್ಲಿಂದಲ್ಲಿಗೆ ಓಡುತ್ತವೆ.

ಅಂದಹಾಗೆ ಈ ಹಿಂದೆ ಪೂಜಾಗಾಂಧಿ ತಮಗೆ ಅಂಧ ಮಕ್ಕಳ ಬಗ್ಗೆ ಪ್ರೀತಿ ಇದೆ ಎಂದು ಎಲ್ಲಿಯೂ ಹೇಳಿರಲಿಲ್ಲ. ತಾವು ಕೂಡಾ ಸಮಾಜ ಸೇವೆ ಮಾಡುತ್ತೇವೆ ಎಂಬುದನ್ನು ತೋರಿಸಲು ಈ ರೀತಿ ನಟರು ಬೇರೆ ಬೇರೆ ಕಡೆಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಒಂದು ಫ್ಯಾಶನ್ ಆಗಿ ಬಿಟ್ಟಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೋಹನ್ ಕನಸು ನನಸು
ಹೊಡಿಮಗ ತುಮಕೂರಿನಲ್ಲಿ
ದೈವ ಭಕ್ತ ಕೋಮಲ್ ಉಪವಾಸ
ಕನ್ನಡಕ್ಕೆ ವಿದೇಶಿ ಲಲನೆಯರ ಜಲಕ್
ಸಂಗಮದ ಅದ್ದೂರಿ ಸಂಗಮ
ರಾಕಿ ಕ್ಯಾಸೆಟ್ ಬಿಡುಗಡೆ
ಗ್ರಹ ಗತಿ
ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸಿಗರ ವಿರುದ್ಧ ಹೇಳಿಕೆ ನೀಡಿದ ಖರ್ಗೆಗೆ ನೋಟಿಸ್
ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ...
31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ
ಮನರಂಜನೆ
ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ
ಮುಂದೆ ಓದಿ|ಮತ್ತಷ್ಟು...