ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ವಿದೇಶಕ್ಕೆ ಹಾರಿದ ಜೊತೆಗಾರ
ಬೆಂಗಳೂರು, ಗುರುವಾರ, 9 ಅಕ್ಟೋಬರ್ 2008   ( 15:41 IST )
ರಮ್ಯಾ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ನಟಿಸಿರುವ 'ಜೊತೆಗಾರ' ಚಿತ್ರದ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ. ಬೆಂಗಳೂರಿನ ಸುತ್ತಮುತ್ತ ಸತತ ಚಿತ್ರೀಕರಣ ಮಾಡಿರುವ ಚಿತ್ರತಂಡ ಇದೀಗ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ಹಾಗೂ ಸ್ವಿಟ್ಜರ್ಲೆಂಡ್‌ಗಳಲ್ಲಿ ಚಿತ್ರೀಕರಣ ಮಾಡಲು ವಿದೇಶಕ್ಕೆ ತೆರಳಿದೆ.

ಜೋಗಿಯಂತಹ ಹಿಟ್ ಚಿತ್ರ ನಿರ್ಮಿಸಿದ ಅಶ್ವಿನಿ ರಾಂ ಪ್ರಸಾದ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ತಮಿಳು ನಿರ್ದೇಶಕ ಸಿಂಗಮಣಿ ಇದರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇದೊಂದು ಫ್ಯಾಮಿಲಿ ಚಿತ್ರವಾಗಿದ್ದು, ಇದರಲ್ಲಿ ಆಶಿಷ್ ವಿದ್ಯಾರ್ಥಿ ರಮ್ಯಾರ ತಂದೆ ಪಾತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ರಮ್ಯಾ ಹಾಗೂ ಪ್ರೇಮ್ ಜೋಡಿ ಜೊತೆ ಜೊತೆಯಲಿ ಚಿತ್ರದಲ್ಲಿ ನಟಿಸಿತ್ತು. ಚಿತ್ರ ಕೂಡಾ ಹಿಟ್ ಆಯಿತು. ಈಗ ಈ ಜೋಡಿ ಮತ್ತೆ ಒಂದಾಗಿದೆ. ಏನಾಗುತ್ತದೋ ಕಾದು ನೋಡಬೇಕು. ತಾರಾಗಣದಲ್ಲಿ ಹಿರಿಯ ನಟಿ ಲಕ್ಷ್ಮೀ, ಅವಿನಾಶ್ ಇದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೋಹನ್ ಕನಸು ನನಸು
ಹೊಡಿಮಗ ತುಮಕೂರಿನಲ್ಲಿ
ದೈವ ಭಕ್ತ ಕೋಮಲ್ ಉಪವಾಸ
ಕನ್ನಡಕ್ಕೆ ವಿದೇಶಿ ಲಲನೆಯರ ಜಲಕ್
ಸಂಗಮದ ಅದ್ದೂರಿ ಸಂಗಮ
ರಾಕಿ ಕ್ಯಾಸೆಟ್ ಬಿಡುಗಡೆ
ಗ್ರಹ ಗತಿ
ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸಿಗರ ವಿರುದ್ಧ ಹೇಳಿಕೆ ನೀಡಿದ ಖರ್ಗೆಗೆ ನೋಟಿಸ್
ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ...
31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ
ಮನರಂಜನೆ
ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ
ಮುಂದೆ ಓದಿ|ಮತ್ತಷ್ಟು...