ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ರಘು ಹಾಡಿಗೆ ತಲೆದೂಗಿದ ಸುದೀಪ್
ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008   ( 16:12 IST )
ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್.

ಸದ್ಯ ಸುದೀಪ್ ತೀರ್ಥ ಚಿತ್ರದ ಚಿತ್ರೀಕರಣ ಮುಗಿಸಿ 'ವೀರಮದಕರಿ' ಚಿತ್ರದ ನಿರ್ದೇಶನ ಹಾಗೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಚಿತ್ರಗಳ ಕೆಲಸ ಮುಗಿಸಿದ ನಂತರ ತಮ್ಮ ಚಿತ್ರದ ಕೆಲಸಕ್ಕೆ ತೊಡಗಿಕೊಳ್ಳಲಿದ್ದಾರೆ. ಈಗ ಅದರ ಪೂರ್ವ ಕೆಲಸದ ಬಗೆಗೆ ಪ್ಲ್ಯಾನ್ ಮಾಡುತ್ತಿದ್ದಾರಂತೆ.

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಸೈಕೋ ಚಿತ್ರಕ್ಕೆ ನೀಡಿದ ಸಂಗೀತ ಈಗಾಗಲೇ ಜನಪ್ರಿಯವಾಗಿದೆ. ಅದರಲ್ಲೂ ಆ ಚಿತ್ರದ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ..' ಹಾಡು ಎಲ್ಲೆಡೆ ಜನಜನಿತವಾಗಿದೆ. ಈಗ ಗಾಂಧಿನಗರದಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕರ ಸಾಲಿನಲ್ಲಿ ರಘು ಕೂಡಾ ಒಬ್ಬರು.

ಅಂದ ಹಾಗೆ ಸುದೀಪ್ ಬಾಲಿವುಡ್‌ನ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರಂತೆ. ಅದರಲ್ಲಿ ಒಂದು ಚಿತ್ರವನ್ನು ರಾಂ ಗೋಪಾಲ ವರ್ಮಾ ನಿರ್ದೇಶಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಂಪಲ್ ನಾಗಶೇಖರ್‌
ಗೌರಿ ಹಬ್ಬ ನಟಿಮಣಿಯರ ಹಬ್ಬ
ದೊಡ್ಡಣ್ಣರ ಹೊಸ ಇನ್ನಿಂಗ್ಸ್
ಬೊಂಬಾಟಾಗದ ಬೊಂಬಾಟ್
ಸೆನ್ಸಾರ್ ಕಾಟ ಸಾಕಪ್ಪಾ!
ಬಸ್‌ನಲ್ಲೇ ಆಗುವುದು ಲವ್
ಗ್ರಹ ಗತಿ
ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಪರೇಷನ್ ಹಸ್ತದ ವಿರುದ್ಧ ಸದಾನಂದಗೌಡ ಕಿಡಿ
ಆಪರೇಷನ್ ಕಮಲವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ಈಗ ಬಿಜೆಪಿ ...
ಕಮಲದ ವಿರುದ್ಧ ಕಾಂಗ್ರೆಸ್ ಆಪರೇಷನ್ ಹಸ್ತ
ಬಿಹಾರದಲ್ಲಿ ಪ್ರವಾಹ: ರಾಜ್ಯದಿಂದ ಸಹಾಯ ಹಸ್ತ
ಮನರಂಜನೆ
ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು.
ಮುಂದೆ ಓದಿ|ಮತ್ತಷ್ಟು...