|
| ಸಿಂಪಲ್ ನಾಗಶೇಖರ್ |
| ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008 ( 16:08 IST ) | |
ಅದು ಅರಮನೆ ಶತದಿನೋತ್ಸವ ಸಂಭ್ರಮ. ಎಲ್ಲರ ಮುಖದಲ್ಲೂ ನಗು. ಮೊದಲ ನಿರ್ದೇಶನದಲ್ಲಿ ಗೆದ್ದ ತೃಪ್ತಿ ನಿರ್ದೇಶಕ ನಾಗಶೇಖರ್ ಮುಖದಲ್ಲಿತ್ತೇ ಹೊರತು ಅಹಂ ಭಾವದೊಂದಿಗೆ ಸ್ಟಾರ್ ಪೋಸ್ ನೀಡುತ್ತಿರಲಿಲ್ಲ. ಸಮಾರಂಭದಲ್ಲಿ ಚಿತ್ರರಂಗಕ್ಕೆ ಆಗಮಿಸಿದ ಸಮಯದಲ್ಲಿನ ತನ್ನ ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರನ್ನು ನೆನೆಸಿಕೊಂಡು ಕೆಲವರನ್ನು ಸನ್ಮಾನಿಸಿದರು.
'ನಿನಗಾಗಿ' ಚಿತ್ರದಲ್ಲಿ ಎಸ್. ಮಹೇಂದರ್‌ಗೆ ಸಹಾಯಕರಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ನಟನೆಗೆ ಅವಕಾಶ ಮಾಡಿಕೊಟ್ಟ ಶಶಾಂಕ್ (ಮೊಗ್ಗಿನ ಮನಸು ನಿರ್ದೇಶಕ) ಅವರನ್ನು ಕರೆದು ಸನ್ಮಾನಿಸಿದರು. ತನಗೆ ಬರವಣಿಗೆ ಬರವಣಿಗೆ ಹೇಳಿಕೊಟ್ಟ ಎಂ.ಎಸ್. ರಮೇಶ್ ಹಾಗೂ ಕಷ್ಟದ ಸಮಯದಲ್ಲಿ ಅನ್ನ ಹಾಕಿದ ಅಶೋಕ್ ಹೆಗಡೆ ಅವರನ್ನು ಸನ್ಮಾನಿಸಿದರು. ಆಗ ಅವರ ಕಣ್ಣಿನಲ್ಲಿ ಸಣ್ಣಗೆ ಕಣ್ಣೀರು ಜಿನುಗುತಿತ್ತು.
ಇಲ್ಲಿ ನಾಗಶೇಖರ್‌ಗೆ ಅಹಂ ಬಂದಿಲ್ಲ. ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ. ಎಂದಿನಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಈಗ ಮೋಹನ ಮುರಳಿ ವಾಂಟೆಡ್ ಗರ್ಲ್ಸ್ ಎಂಬ ಸಿನಿಮಾಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಇಲ್ಲಿಯೂ ಗಣೇಶ್ ನಾಯಕ. ಈ ಚಿತ್ರ ಏನಾಗುತ್ತದೋ ಗುಡ್ಲಕ್ ನಾಗಣ್ಣ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು. |
| |
|
|
|
|
|
|
|