ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಗೌರಿ ಹಬ್ಬ ನಟಿಮಣಿಯರ ಹಬ್ಬ
ಬೆಂಗಳೂರು, ಮಂಗಳವಾರ, 2 ಸೆಪ್ಟೆಂಬರ್ 2008   ( 16:06 IST )
ಗೌರಿ ಹಬ್ಬ ಎಂದರೆ ಮುಖ್ಯವಾಗಿ ಹೆಂಗಳೆಯರ ಹಬ್ಬ ಎಂದೇ ಖ್ಯಾತಿ. ಸದಾ ಕೆಲಸದಲ್ಲಿ ಬ್ಯುಸಿಯಾಗಿರುವ ಮಹಿಳೆಯರೆಲ್ಲರೂ ಆ ದಿನದಂದು ರಜೆ ಮಾಡಿ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಾರೆ. ವರ್ಷವೀಡೀ ಸದಾ ಶೂಟಿಂಗ್‌ನಲ್ಲಿ ಸದಾ ಬ್ಯುಸಿಯಾಗಿರುವ ನಟಿಯರು ಕೂಡಾ ಶೂಟಿಂಗ್‌ಗೆ ಬಿಡುವು ಮಾಡಿದ್ದಾರೆ.

ನಟಿ ರಮ್ಯಾ ಹಬ್ಬದ ದಿವಸ್ ಶೂಟಿಂಗ್‌ಗೆಂದು ಹೊರಗೆ ಹೋಗುವುದಿಲ್ಲವಂತೆ. ಹಬ್ಬದ ದಿನ ಮನೆಯವರೊಂದಿಗೆ ಕುಳಿತು ಊಟ ಮಾಡುವುದನ್ನು ಮಿಸ್ ಮಾಡುವುದಿಲ್ಲ. ಅದಕ್ಕಾಗಿ ಎಂತಹ ಬ್ಯುಸಿ ಶೂಟಿಂಗ್ ಇದ್ದರೂ ಅದನ್ನು ಮುಂದಕ್ಕೆ ಹಾಕುತ್ತೇನೆ ಎನ್ನುತ್ತಾರೆ ರಮ್ಯಾ. ನಟಿ ರಾಧಿಕಾ ಗಾಂದಿ ಮನೆಯಲ್ಲಿ ದೇವರ ಫೋಟೋ ಇಟ್ಟು ಹಬ್ಬ ಆಚರಿಸುತ್ತಾರಂತೆ.

ಮಂಗಳೂರು ಬೆಡಗಿ ಶುಭಾ ಪೂಂಜಾಗೆ ಗೌರಿ ಹಾಗೂ ಗಣೇಶನ ಹಬ್ಬವೆಂದರೆ ತುಂಬಾ ಇಷ್ಟವಂತೆ. ಮಂಗಳೂರಿನಲ್ಲಿ ವಿಗ್ರಹ ಕೂರಿಸಿ ಪೂಜಿಸುವುದರಿಂದ ಅಲ್ಲಿ ಹಬ್ಬವನ್ನು ಇನ್ನಷ್ಟು ಸಡಗರದಿಂದ ಆಚರಿಸಲಾಗುತ್ತದೆ. ಆ ದಿನ ಮನೆಯವರೊಂದಿಗೆ ಕುಳಿತು ಬಗೆ ಬಗೆಯ ಮಂಗಳೂರು ಖಾದ್ಯಗಳನ್ನು ಸವಿಯುತ್ತೇನೆ ಎನ್ನುತ್ತಾರೆ ಈ ಕರಾವಳಿ ಕನ್ಯೆ.

ಒಟ್ಟಾಗಿ ಸ್ಯಾಂಡಲ್ವುಡ್‌ನ ಬಾಲೆಯರು ಗೌರಿ ಹಬ್ಬವನ್ನು ಭರ್ಜರಿಯಾಗಿಯೇ ಆಚರಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದೊಡ್ಡಣ್ಣರ ಹೊಸ ಇನ್ನಿಂಗ್ಸ್
ಬೊಂಬಾಟಾಗದ ಬೊಂಬಾಟ್
ಸೆನ್ಸಾರ್ ಕಾಟ ಸಾಕಪ್ಪಾ!
ಬಸ್‌ನಲ್ಲೇ ಆಗುವುದು ಲವ್
ದಯಾನಂದ್ ಅಮೆರಿಕಾಕ್ಕೆ ಹೋಗಿಲ್ಲ!?
ಸಂಗಮಕ್ಕೆ ದೇವಿಶ್ರೀ ಸಂಗೀತ
ಗ್ರಹ ಗತಿ
ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಪರೇಷನ್ ಹಸ್ತದ ವಿರುದ್ಧ ಸದಾನಂದಗೌಡ ಕಿಡಿ
ಆಪರೇಷನ್ ಕಮಲವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರುದ್ಧ ಈಗ ಬಿಜೆಪಿ ...
ಕಮಲದ ವಿರುದ್ಧ ಕಾಂಗ್ರೆಸ್ ಆಪರೇಷನ್ ಹಸ್ತ
ಬಿಹಾರದಲ್ಲಿ ಪ್ರವಾಹ: ರಾಜ್ಯದಿಂದ ಸಹಾಯ ಹಸ್ತ
ಮನರಂಜನೆ
ಚಿತ್ರ ಸುದ್ದಿ - ಇತ್ತೀಚೆಗೆ ಬಿಡುಗಡೆಯಾದ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಕಾಮಣ್ಣನಾಗಿ ನಟಿಸಿ ದೊಡ್ಡಣ್ಣ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಕಳ್ಳನಷ್ಟೆ ಅಲ್ಲ, ಕುಡುಕನಾಗಿಯೂ ಅದ್ಬುತವಾಗಿ ನಟಿಸಿದ್ದರು.
ಮುಂದೆ ಓದಿ|ಮತ್ತಷ್ಟು...