|
| ಬಸ್‌ನಲ್ಲೇ ಆಗುವುದು ಲವ್ |
| ಬೆಂಗಳೂರು, ಶನಿವಾರ, 30 ಆಗಸ್ಟ್ 2008 ( 14:49 IST ) | |
ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ. ನಂತರ ಬಸ್ಸಿನಂತೆ ಏರು ತಗ್ಗು ದಿಣ್ಣೆಗಳ ನಡುವೆ ಇವರ ಪ್ರೀತಿ ಸಾಗುತ್ತದೆ. ಇದು 'ಪಯಣ' ಚಿತ್ರದ ಒನ್ ಲೈನ್ ಸ್ಟೋರಿ.
ಪಯಣ ಚಿತ್ರವನ್ನು ಕಿರಣ್ ಗೋವಿ ನಿರ್ದೇಶಿಸುತ್ತಿದ್ದು, ಚಿತ್ರದ ಕಥೆಗೆ ತಕ್ಕಂತೆ ಹೆಸರಿಟ್ಟಿದ್ದೇನೆ ಎನ್ನುತ್ತಾರೆ. ಮಧ್ಯಮ ವರ್ಗದ ಆಸೆ ಕನಸುಗಳು ಈಡೇರುವುದು ಭಾರೀ ಕಷ್ಟ. ಆದರೆ ಈ ಚಿತ್ರದಲ್ಲಿ ಮಾತ್ರ ನಾಯಕನ ಕನಸ್ಸನ್ನು ಈಡೇರಿಸಿದ್ದಾರೆ. ಕಿರಣ್ ಗೋವಿ ಈ ಹಿಂದೆ ಜಾಹೀರಾತುಗಳಿಗೆ ನಿರ್ದೇಶನದ ಜೊತೆಗೆ ಚಿತ್ರಗಳಿಗೆ ಸಹ ನಿರ್ದೇಶಕರಾಗಿದ್ದರು.
ಈ ಚಿತ್ರದಲ್ಲಿ ನಾಯಕನಾಗಿ ಸಿಲ್ಲಿಲಲ್ಲಿ ಖ್ಯಾತಿಯ ರವಿಕಿರಣ್ ನಾಯಕರಾಗಿ ನಟಿಸುತ್ತಿದ್ದಾರೆ. ಪಲ್ಲಕ್ಕಿ ಚಿತ್ರ ರಮನಿತೋ ಚೌಧರಿ ಇಲ್ಲಿ ನಾಯಕಿಯಾಗಿದ್ದಾರೆ. ಐಹೊಳೆ, ಪಟ್ಟದಕಲ್ಲು, ಬಾದಾಮಿ ಹಾಗೂ ಇತರ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ವಿ.ಹರಿಕೃಷ್ನ ಸಂಗೀತ ನೀಡಿದ್ದು, ರಂಗಾಯಣ ರಘು, ಚಿತ್ರಾ ಶೆಣೈ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಶಾಸಕರು ಸಚಿವರುಗಳು ಅಮೆರಿಕಾಕ್ಕೆ ಅಕ್ಕಾ ಸಮ್ಮೇಳನಕ್ಕಾಗಿ ಹಾರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕನ್ನಡ ಚಿತ್ರರಂಗದಿಂದ ಒಂದಷ್ಟು ಮಂದಿ ಗುರುವಾರ ರಾತ್ರಿ ಅಮೆರಿಕಾಕ್ಕೆ ಹೋಗಿದ್ದಾರೆ. ಅಕ್ಕಾ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಗುರುಕಿರಣ್ ಹತ್ತು |
| |
|
|
|
|
|
|
|