|
| ತಮಿಳಿಗೆ ಕೈ ಹಾಕಲಿರುವ ಓಂ ಪ್ರಕಾಶ್ ರಾವ್ |
| ಬೆಂಗಳೂರು, ಶನಿವಾರ, 19 ಜುಲೈ 2008 ( 15:07 IST ) | |
ಕನ್ನಡಕ್ಕೆ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ನಟ ಓಂ ಪ್ರಕಾಶ್ ರಾವ್ ಈಗ ತಮಿಳು ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಶರತ್ ಕುಮಾರ್ ನಾಯಕ. ಈ ಹಿಂದೆ ತಮಿಳು, ತೆಲುಗು ಚಿತ್ರಗಳಿಂದ ದೃಶ್ಯ ಹಾಗೂ ಡೈಲಾಗುಗಳನ್ನು ಎತ್ತಿಕೊಳ್ಳುತ್ತಿದ್ದ ಇವರು ಈಗ ನೇರವಾಗಿ ತಮಿಳು ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ.
ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದಾರೆ. ಇದು ಭಯೋತ್ಪಾದನೆಯ ವಿರುದ್ಧ ಹೋರಾಡುವ ಚಿತ್ರ. ಇದನ್ನು ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಲು ಸಿದ್ಧತೆ ನಡೆಸಲಾಗಿದೆ ಎಂದರು ಓಂ ಪ್ರಕಾಶ್. ಈ ಹಿಂದೆ ಹೊಗೇನಕಲ್ ವಿವಾದದಲ್ಲಿ ಶರತ್ ಕುಮಾರ್ ವಿವಾದದ ಹೇಳಿಕೆ ನೀಡಿದ್ದರು.
ಕನ್ನಡ ನಿರ್ದೇಶಕ ತಮಿಳು ಚಿತ್ರ ನಿರ್ದೇಶಿಸುವುದು ಹೆಮ್ಮೆಯ ವಿಷಯ. ಅನ್ಯ ಭಾಷಾ ನಿರ್ದೇಶಕರು ಮತ್ತು ನಾಯಕಿಯರು ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ. ಇತ್ತೀಚಿನ ನಿರ್ದೇಶಕರಲ್ಲಿ ಯಾರೊಬ್ಬರೂ ತಮಿಳು ಚಿತ್ರ ನಿರ್ದೇಶಿಸಿಲ್ಲ ಎಂದು ತಮ್ಮ ಸಾಧನೆಯ ಬಗ್ಗೆ ಹೇಳಿಕೊಂಡರು ನಿರ್ದೇಶಕ ಓಂ ಪ್ರಕಾಶ್.
ಈ ಹಿಂದೆ ಎ.ಕೆ.47 ನಂತಹ ಸೂಪರ್ ಹಿಟ್ ಚಿತ್ರನಿರ್ದೇಶಿಸಿದ್ದ ಓಂ ಈಗ ಮತ್ತೆ ಶಿವಣ್ಣ ಅವರ ಜೊತೆ ಎ.ಕೆ 97 ಚಿತ್ರ ಮಾಡಲು ಸಿದ್ಧರಾಗಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|