|
| ಹಿರಿತೆರೆಗೆ ಡಾ. ವಿಠ್ಠಲ್ ರಾವ್ ಪಯಣ! |
| ಬೆಂಗಳೂರು, 18 ಜುಲೈ 2008 ( 19:08 IST ) | |
ಅದು ಪಯಣ ಚಿತ್ರದ ಪತ್ರಿಕಾಗೋಷ್ಟಿ. ಪಯಣಿಗ ಡಾ| ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್. ನಾನು ಮಗು ಇದ್ದಹಾಗೆ. ನೀವು ಮಾರ್ಗದರ್ಶಕರು, ಎಲ್ಲಿ ಬಿಡ್ತಿರೋ ಬಿಡಿ ಅಂದರು ಪತ್ರಕರ್ತರಿಗೆ.
ಮಾತು ಮುಂದುವರಿಸಿ ತಂದೆ ಮತ್ತು ಸೋದರಮಾವ ಸಿನಿಮಾ ಆಪರೇಟರ್ ಆಗಿದ್ದರು. ಕ್ಯಾಬಿನ್ನಿನಲ್ಲಿ ಕೂರಿಸಿ ಸಿನಿಮಾ ತೋರಿಸ್ತಿದ್ರು. ರಾಜ್ ಕುಮಾರ್, ವಿಷ್ಣುವರ್ಧನ್‌ರಂಥ ನಟರನ್ನು ಕಂಡಾಗ ನನಗೂ ಸಿನಿಮಾ ನಟನಾಗಬೇಕೆಂಬ ಆಸೆ ಇತ್ತು. ಆ ಕನಸು ಈಗ ನನಸಾಗಿದೆ ಎಂದು ಧನ್ಯತಾಭಾವ ತಳೆದರು.
ಡಾಕ್ಟ್ರಿಗೆ ಕಿರುತೆರೆ ಬೋರು ಹೊಡೆಸಿದೆ. ಹಾಗಾಗಿ ಹಿರಿತೆರೆ ಕಡೆ ದೃಷ್ಟಿನೆಟ್ಟಿದ್ದಾರೆ. ಅದಕ್ಕೆ ಯಶಸ್ಸು ದೊರೆತು ಅವಕಾಶವೂ ಸಿಕ್ಕಿದೆ ! ಈಗ ಅವರು ಪಯಣ ಚಿತ್ರದ ನಾಯಕ. ಪಯಣದಲ್ಲಿ ಅವರದ್ದು ಡ್ರೈವರ್ ಪಾತ್ರ. ಎನ್ಆರ್ಐ ಹುಡುಗಿಯನ್ನು ಪ್ರೀತಿಸುವ ಪಾತ್ರ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದೇ ಕಥೆಯ ಸಾರ. ಕಿರಣ್ ಗೋವಿ ನಿರ್ದೇಶಕರು. ರಮಣೀತೋ ಚೌಧರಿ ನಾಯಕಿ. ಹರಿಕೃಷ್ಣ ಅವರಿಂದ ಸಂಗೀತ. ಚಿತ್ರದಲ್ಲಿ 7 ಹಾಡುಗಳಿದ್ದು ಅವರು ಈ ವರ್ಷದ ಮೆಲೋಡಿಯಸ್ ಹಾಡುಗಳ ಸಾಲಿಗೆ ಸೇರುತ್ತವೆಂದು ರವಿಶಂಕರ್ ಆತ್ಮವಿಶ್ವಾಸ.
ಇನ್ನೂ 2-3 ಚಿತ್ರಗಳಿಗಾಗಿ ಆಫರ್ ಬಂದಿದೆ. ಆದರೆ ಪಯಣದ ರಿಸಲ್ಟ್ ಬಂದ ಮೇಲಷ್ಟೆ ಮುಂದೆ ಹೆಜ್ಜೆ ಇಡಬೇಕು ಅನ್ನೋದು ಅವರ ಲೆಕ್ಕಾಚಾರ. ಮತ್ತೆ ಕಿರುತೆರೆಯಲ್ಲಿ ನಟಿಸುವಿರಾ ಅಂದರೆ, ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ಅಂತಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|